ADVERTISEMENT

ಹೆಗ್ಗಾರ: ಹೊಸ ಅಂಗನವಾಡಿ ಕಟ್ಟಡಕ್ಕೆ ಒತ್ತಾಯಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 11:02 IST
Last Updated 22 ಅಕ್ಟೋಬರ್ 2019, 11:02 IST
ಅಂಕೋಲಾ ತಾಲ್ಲೂಕಿನ ಡೋಂಗ್ರಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಈಚೆಗೆ ಪ್ರಥಮ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಯಿತು
ಅಂಕೋಲಾ ತಾಲ್ಲೂಕಿನ ಡೋಂಗ್ರಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಈಚೆಗೆ ಪ್ರಥಮ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಯಿತು   

ಕಾರವಾರ: ಅಂಕೋಲಾ ತಾಲ್ಲೂಕಿನ ಹೆಗ್ಗಾರದಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸುವಂತೆಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ಡೋಂಗ್ರಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಈಚೆಗೆ ನಡೆದ ಪ್ರಥಮಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಹೆಗ್ಗಾರ ಅಂಗನವಾಡಿ ಕಟ್ಟಡವು ಶಿಥಿಲಗೊಂಡು ಎರಡು ವರ್ಷಗಳಾದವು. ಯುವಕ ಸಂಘದ ಆವರಣದಲ್ಲಿ ಸದ್ಯ ಅಂಗನವಾಡಿ ನಡೆಸಲಾಗುತ್ತಿದೆ.ಆದರೂಹೊಸ ಕಟ್ಟಡದ ನಿರ್ಮಾಣವಾಗಿಲ್ಲ. ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ADVERTISEMENT

ಪ್ರವಾಹದಲ್ಲಿ ಗಂಗಾವಳಿ ನದಿಯ ತೂಗು ಸೇತುವೆ ಕೊಚ್ಚಿಹೋದ ಕಾರಣ ಬದಲಿ ವ್ಯವಸ್ಥೆಯಾಗಿ ಕಲ್ಲೇಶ್ವರ– ರಾಮನಗುಳಿ ನಡುವೆ ದೋಣಿ ಸಂಚಾರವಿದೆ. ಅದಕ್ಕೆಸೂಕ್ತ ಯಂತ್ರಅಳವಡಿಸಬೇಕೆಂದು ಮಳಗಾಂ ಶಾಲಾ ಶಿಕ್ಷಕರು ವಿನಂತಿಸಿದರು. ಈ ಬಗ್ಗೆ ಗ್ರಾಮ ಪಂಚಾಯ್ತಿಯಿಂದಪರಿಶೀಲಿಸಿ‌ ಕ್ರಮ ಕೈಗೊಳ್ಳುವ ಭರವಸೆ‌ ನೀಡಲಾಯಿತು.

ನೆರೆಯಿಂದಾಗಿ ತೋಟಗಾರಿಕಾ ಬೆಳೆಗಳ ಹಾನಿ ಹಾಗೂಕೃಷಿ ಬೆಳೆ‌ ಹಾನಿಯನ್ನುಈಗಾಗಲೇ‌ ಮೌಲ್ಯಮಾಪನ‌ ಮಾಡಲಾಗಿದೆ. ಈ ಸಂಬಂಧ ವರದಿಯನ್ನು ಕಂದಾಯ ಇಲಾಖೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಹೆಚ್ಚಿನ‌ ಹಾನಿಯಾದ ಡೋಂಗ್ರಿ ಗ್ರಾಮ ಪಂಚಾಯ್ತಿಗೆರಸರ್ಕಾರದ ಹೆಚ್ವಿನ‌ ನೆರವು ನೀಡುವ ಬಗ್ಗೆ ಸಭೆಯಲ್ಲಿ ಒತ್ತಾಯ ಕೇಳಿಬಂತು.

ವಿವಿಧ ಅಂಗನವಾಡಿಗಳ ಶಿಕ್ಷಕಿಯರು ಕುಂದುಕೊರತೆಗಳನ್ನು ಹೇಳಿಕೊಂಡರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಣ್ಣ ವೈದ್ಯ ಅಧ್ಯಕ್ಷತೆವಹಿಸಿದ್ದರು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಿರೀಶ ನಾಯಕ ಸ್ವಾಗತಿಸಿದರು.

ತಾಲ್ಲೂಕುಕೃಷಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಎಲ್ಲ ಶಾಲೆಗಳ ಶಿಕ್ಷಕ ಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಆರೋಗ್ಯ ಇಲಾಖೆಯ ಪ್ರತಿನಿಧಿಗಳು, ಪ್ರೌಢಶಾಲಾ ಶಿಕ್ಷಕ‌ ಪ್ರತಿನಿಧಿಗಳು ಹಾಗು ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.