ಅಂಕೋಲಾದ ಶೇವ್ಕಾರ ಗ್ರಾಮದಲ್ಲಿ ಹಮ್ಮಿಕೊಂಡಡಿದ್ದ ‘ಸ್ನೇಹ ಸಮ್ಮೇಳನ’ ಕಾರ್ಯಕ್ರಮ (ಸಂಗ್ರಹ ಚಿತ್ರ)
ಕಾರವಾರ: ಅಂಕೋಲಾ ತಾಲ್ಲೂಕು ಹವ್ಯಕ ಸಂಘಟಿತ ಸಾಂಸ್ಕೃತಿಕ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ ಫೆ.24 ರಂದು ಸುಂಕಸಾಳದ ಕಟ್ಟಿನಹಕ್ಕಲಿನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆ ಮಾಡಿರುವ ತಾಲ್ಲೂಕಿನ ಹವ್ಯಕ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ, ಹವ್ಯಕ ಅಗ್ರಣಿ, ಹವ್ಯಕ ಆದರ್ಶ ಕುಟುಂಬ, ಹವ್ಯಕ ಪಾರಿಜಾತೆ, ಸಾಧಕ ಸೌರಭ, ಆರ್ಥಿಕ ಚೇತನ ಗೌರವ ಪುರಸ್ಕಾರಗಳು ನಡೆಯಲಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹವ್ಯಕ ಸಂಘದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.