ADVERTISEMENT

ಉಕ್ಕೇರಿದ ಗುಂಡಬಾಳ ನದಿ: ಗ್ರಾಮಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 6:38 IST
Last Updated 1 ಆಗಸ್ಟ್ 2024, 6:38 IST
<div class="paragraphs"><p>ಹೊನ್ನಾವರದಲ್ಲಿ ರಾತ್ರಿ ನಿರಂತರ ಮಳೆಯಾಗಿದ್ದು ಗುಂಡಬಾಳಾ ನದಿ ದಂಡೆ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದೆ.</p></div>

ಹೊನ್ನಾವರದಲ್ಲಿ ರಾತ್ರಿ ನಿರಂತರ ಮಳೆಯಾಗಿದ್ದು ಗುಂಡಬಾಳಾ ನದಿ ದಂಡೆ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದೆ.

   

ಹೊನ್ನಾವರ: ತಾಲ್ಲೂಕಿನಾದ್ಯಂತ ತಡರಾತ್ರಿಯಿಂದ ನಿರಂತರ ಮಳೆ ಸುರಿದ ಪರಿಣಾಮ ಗುಂಡಬಾಳ ನದಿಯಂಚಿನ ಗುಂಡಿಬೈಲು ಗ್ರಾಮ ಪ್ರವಾಹದ ಸಮಸ್ಯೆ ಎದುರಿಸಿದೆ.

ಘಟ್ಟದ ಮೇಲಿನ ಸಿದ್ದಾಪುರ ಭಾಗದಲ್ಲಿಯೂ ಮಳೆ ಸುರಿಯುತ್ತಿರುವ ಜತೆಗೆ ಹೊನ್ನಾವರ ಭಾಗದಲ್ಲಿ ಮಳೆ ಬೀಳುತ್ತಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ADVERTISEMENT

ಗುಂಡಿಬೈಲು ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ತೋಟ, ಗದ್ದೆಗಳು ಜಾಲವೃತಗೊಂಡಿವೆ. ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಗೇರುಸೊಪ್ಪ ಜಲಾಶಯದಿಂದ ಗುರುವಾರ ಬೆಳಿಗ್ಗೆ ನೀರು ಹೊರಬಿಡಲಾಗಿದ್ದು, ಶರಾವತಿ ನದಿಯಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.