ADVERTISEMENT

ಯಲ್ಲಾಪುರ: ಗಾಳಿ, ಮಳೆಯಿಂದ ಭಾರಿ ಹಾನಿ

​ಪ್ರಜಾವಾಣಿ ವಾರ್ತೆ
Published 26 ಮೇ 2020, 8:34 IST
Last Updated 26 ಮೇ 2020, 8:34 IST
ಮಳೆಯಿಂದಾಗಿ ಮರಗಳು ಬಿದ್ದಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಳೆಯಿಂದಾಗಿ ಮರಗಳು ಬಿದ್ದಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.   

ಯಲ್ಲಾಪುರ: ತಾಲ್ಲೂಕಿನ ಉಮ್ಮಚಗಿ ಭಾಗದಲ್ಲಿ ಎರಡು ದಿನಗಳಿಂದ ಸಂಜೆ ಆಗಾಗ ಬೀಸುವ ರಭಸದ ಗಾಳಿ ಮತ್ತು ಮಳೆಯಿಂದ ಅಡಿಕೆ ಮರಗಳು, ವಿದ್ಯುತ್ ಕಂಬಗಳು ಮುರಿದಿವೆ.

ಹುಣೆಮನೆ, ಸೂರ್ ಬೈಲ್, ಬಾಳೆಗದ್ದೆ ಮುಂತಾದ ಊರುಗಳಲ್ಲಿ ರೈತರ ಹೊಲ, ಗದ್ದೆ ತೋಟಗಳಿಗೆ ಹಾನಿಯಾಗಿದೆ. ಭೂತನಕಲ್ ಜಡ್ಡಿಯ ಕೇಶವ ಗಣೇಶ ಭಟ್ಟ ಅವರ ಅಡಿಕೆ ತೋಟದಲ್ಲಿ 30ಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದು ಬಿದ್ದಿವೆ. ತೋಟದ ಕಲ್ಲಳ್ಳಿ- ನರಿಸರದ ಸೀತಾರಾಮ ಹೆಗಡೆ ಅವರ ಎಕರೆಗಟ್ಟಲೆ ಬಾಳೆಗಿಡಗಳಿಗೆ ಹಾನಿಯಾಗಿದೆ.

ಹುಣಸೆಮನೆ ಭಾಗದಲ್ಲಿ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಕಾಡಿನ ಮರಗಳೂ ಬಹಳ ಪ್ರಮಾಣದಲ್ಲಿ ನೆಲಕ್ಕುರುಳಿವೆ.

ADVERTISEMENT

ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮ ಪಂಚಾಯ್ತಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.