
ಅಂಕೋಲಾ (ಉತ್ತರಕನ್ನಡ ಜಿಲ್ಲೆ): ತಾಲ್ಲೂಕಿನ ಅಗಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದ್ಕಣಿ ಗ್ರಾಮದ ಅರಣ್ಯ ಪ್ರದೇಶದಲ್ಲಿ 12ನೇ ಶತಮಾನದ ಆರಂಭ ಕಾಲದ ನಾಗವರ್ಮ ಅರಸನ ಆಡಳಿತಾವಧಿಯ ವೀರಗಲ್ಲು ಸೋಮವಾರ ಪತ್ತೆಯಾಗಿದೆ.
ಸಂಶೋಧಕ ಶ್ಯಾಮಸುಂದರ ಗೌಡ, ಶಿಕ್ಷಕರಾದ ದಿವಾಕರ ದೇವನ್ಮನೆ, ನೀಲಕಂಠ ಗೌಡ, ಸ್ಥಳೀಯರಾದ ಕೇಶವ ಭಂಡಾರಿ ಅವರ ಕ್ಷೇತ್ರ ಕಾರ್ಯದಲ್ಲಿ ಇದು ದೊರೆತಿದೆ.
ʻವೀರಗಲ್ಲು 5 ಅಡಿ ಎತ್ತರ, 22 ಅಂಗುಲ ಅಗಲ ಇದೆ. ಒಟ್ಟು ಏಳು ಪಟ್ಟಿಕೆಗಳಲ್ಲಿ ಇದನ್ನು ಚಿತ್ರಿಸಲಾಗಿದ್ದು, ಇದರಲ್ಲಿ ಯಾವುದೇ ಬರವಣಿಗೆ ಇಲ್ಲ. ಇದು ಶಾಸನ ರಹಿತ ವೀರಗಲ್ಲು’ ಎಂದು ಶ್ಯಾಮಸುಂದರ ಗೌಡ ಸುದ್ದಿಗಾರರಿಗೆ ತಿಳಿಸಿದರು.
‘ಅಂಕೋಲಾ, ಕುಮಟಾ, ಹೊನ್ನಾವರ ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚು ಕಡೆ ಇಂತಹುದು ದೊರೆತಿವೆ. ಅವೆಲ್ಲವೂ ಒಂದೇ ರೀತಿಯ ಶಿಲ್ಪ ಶೈಲಿ ಹೊಂದಿವೆ. ಅದರಲ್ಲಿ ಒಂಬತ್ತು ವೀರಗಲ್ಲುಗಳಲ್ಲಿ ಶಾಸನವಿದ್ದು, ಅಲ್ಲಲ್ಲಿ ನಾಗವರ್ಮ ಅರಸನ ಹೆಸರಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.