ಹೊನ್ನಾವರ: ತಾಲ್ಲೂಕಿನ ಕಾಸರಕೋಡ ರೋಷನ್ ಮೊಹಲ್ಲಾ ಮಸೀದಿ ಸಮೀಪ ಕಟ್ಟಡ ನಿರ್ಮಾಣಕ್ಕಾಗಿ ಇಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್ ಕಳವು ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ದೊಡ್ಡಪೇಟೆಯ ತನ್ವೀರ ಅಹಮ್ಮದ ಮಹ್ಮದ ಇಸಾಕ್ ಸಾಬ್, ಕುಮುದ್ವತಿ ನಗರದ ಷಹಾದ್ ಉಲ್ಲಾ ನಜೀರ್ ಸಾಬ್, ಕುಂಬಾರಗುಂಡಿಕೊಪ್ಪಲಿನ ಮಹ್ಮದ ಮನ್ಸೂರ ಇಲಿಯಾಸ್ ಅಹ್ಮದ್ ಹಾಗೂ ಖಾಜೀಕೇರಿಯ ಕಲೀಮುಲ್ಲಾ ಕಲೀಂ ಭಕ್ಷಿ ಸಾಬ್ ಬಂಧಿತ ಆರೋಪಿಗಳು.
ಇವರು ಅಂತರ ಜಿಲ್ಲಾ ಕಳ್ಳರೂ ಆಗಿದ್ದು, ₹2 ಲಕ್ಷ ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಹಾಗೂ ₹5 ಲಕ್ಷ ಮೊತ್ತದ ವಾಹನ ವಶಪಡಿಸಿಕೊಳ್ಳಲಾಗಿದೆ.
ಕಳವು ಕುರಿತು ಜುಲೈ 15ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾರ್ಗದರ್ಶನದಲ್ಲಿ ಪಿ.ಎಸ್.ಐ. ರಾಜಶೇಖರ ವಂದಲಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.