ADVERTISEMENT

ಹೊನ್ನಾವರ | ಜೇನು ನೊಣ ಕಡಿತ: ಕೂಲಿಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 16:55 IST
Last Updated 13 ಜನವರಿ 2026, 16:55 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಹೊನ್ನಾವರ (ಉತ್ತರ ಕನ್ನಡ): ತಾಲ್ಲೂಕಿನ ಅನಿಲಗೋಡ ಜನತಾ ವಿದ್ಯಾಲಯದ ಹಿಂಭಾಗದ ರಸ್ತೆಯಲ್ಲಿ ಮಂಗಳವಾರ ಜೇನುನೊಣಗಳು ಕಚ್ಚಿ ಕೃಷಿ ಕೂಲಿಕಾರ್ಮಿಕ ಮಂಜುನಾಥ ಗಣಪ ಅಂಬಿಗ (53) ಮೃತಪಟ್ಟಿದ್ದಾರೆ.

‘ಅನಿಲಗೋಡ ಹೊಳೆಬದಿಕೇರಿ ನಿವಾಸಿ ಮಂಜುನಾಥ ಅವರು ಮೃತರು. ತೀವ್ರ ಅಸ್ವಸ್ಥಗೊಂಡಿದ್ದ ಅವರು ಆಸ್ಪತ್ರೆಯ ಮಾರ್ಗ ಮಧ್ಯೆಯೇ ಮೃತಪಟ್ಟರು. ಅವರೊಂದಿಗೆ ನಾಲ್ಕು ಮಂದಿ ಇದ್ದರು. ಜೇನು ನೊಣಗಳು ದಾಳಿ ನಡೆಸಿದ ಕೂಡಲೇ ಎಲ್ಲರೂ ಓಡಿ ಹೋದರು’ ಎಂದು ಮಂಕಿ ಠಾಣೆ ಪೊಲೀಸರು ತಿಳಿಸಿದ್ದಾರೆ.ರು.

ADVERTISEMENT

‘ಜೇನು ಕಡಿತದ ಪ್ರಕರಣಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ಸಿಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.