ADVERTISEMENT

ಅಂಕೋಲಾ: ಮನೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 15:26 IST
Last Updated 20 ಸೆಪ್ಟೆಂಬರ್ 2020, 15:26 IST
ಅಂಕೋಲಾ ತಾಲ್ಲೂಕಿನ ಮೂಲೆಭಾಗ ಪ್ರದೇಶದಲ್ಲಿ ಭಾನುವಾರ ಮನೆಯೊಂದು ಜಲಾವೃತವಾಯಿತು
ಅಂಕೋಲಾ ತಾಲ್ಲೂಕಿನ ಮೂಲೆಭಾಗ ಪ್ರದೇಶದಲ್ಲಿ ಭಾನುವಾರ ಮನೆಯೊಂದು ಜಲಾವೃತವಾಯಿತು   

ಅಂಕೋಲಾ: ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಮಳೆ ಜೋರಾಗಿ ಬೀಳುತ್ತಿದೆ. ಕೇಣಿ ಮೂಲೆಭಾಗ ಪ್ರದೇಶದ ನಾಲ್ಕೈದು ಮನೆಗಳು ಭಾನುವಾರ ಜಲಾವೃತವಾದವು.

ರಭಸವಾಗಿ ಬೀಸಿದ ಗಾಳಿಗೆ ಕೇಣಿ ಮೂಲೆಭಾಗ ಪ್ರದೇಶದ ಪ್ರಕಾಶ ಮಾದೇವ ಹರಿಕಂತ್ರ ಎಂಬುವವರ ಮನೆ ಚಾವಣಿಯ ಶೀಟ್‌ಗಳು ಹಾರಿಹೋದವು. ಇದೇ ಪ್ರದೇಶದ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದ ಕಾರಣ ಉಕ್ಕಿ ಹರಿಯಿತು. ಇದರಿಂದ ಮನೆಗಳಿಗೆ ನೀರು ನುಗ್ಗಿತು. ಚರಂಡಿಯನ್ನು ಸರಿಪಡಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇತ್ತ ಗಂಗಾವಳಿ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಇದೇರೀತಿ ಮಳೆ ಮುಂದುವರಿದರೆ ಪ್ರವಾಹ ಎದುರಾಗಬಹುದು ಎಂಬ ಭೀತಿಯಲ್ಲಿ ನದಿ ತೀರದ ನಿವಾಸಿಗಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.