ADVERTISEMENT

ಕುಮಟಾ: ‘ಇಂಡೊ ಪ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್‌’ನ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 14:19 IST
Last Updated 12 ಮಾರ್ಚ್ 2021, 14:19 IST
ಕುಮಟಾ ತಾಲ್ಲೂಕಿನ ಗುಡೆಅಂಗಡಿಯ ಸಮುದ್ರ ತೀರದಲ್ಲಿ ಶುಕ್ರವಾರ ಕಂಡು ಬಂದ ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೇಬರ.
ಕುಮಟಾ ತಾಲ್ಲೂಕಿನ ಗುಡೆಅಂಗಡಿಯ ಸಮುದ್ರ ತೀರದಲ್ಲಿ ಶುಕ್ರವಾರ ಕಂಡು ಬಂದ ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೇಬರ.   

ಕುಮಟಾ: ತಾಲ್ಲೂಕಿನ ಗುಡೆಅಂಗಡಿ ಸಮುದ್ರ ತೀರದಲ್ಲಿ ಶುಕ್ರವಾರ 2.55 ಮೀಟರ್ ಉದ್ದದ, ಸುಮಾರು 250 ಕೆ.ಜಿ ತೂಕದ ‘ಇಂಡೊ ಪ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್‌’ನ ಕಳೇಬರ ಪತ್ತೆಯಾಗಿದೆ. ಆಹಾರ ಹುಡುಕುತ್ತ ದಡದ ಬಳಿಗೆ ಬಂದು, ಅಲೆಯ ಹೊಡೆತಕ್ಕೆ ಸಿಲುಕಿ ಮರಳಿಗೆ ಬಿದ್ದು ಸತ್ತಿರಬಹುದು ಎಂದು ಊಹಿಸಲಾಗಿದೆ.

20ರಿಂದ 25 ಮೀಟರ್ ಆಳಸಮುದ್ರದಲ್ಲಿ ವಾಸವಿರುವ ಇವು, 15ರಿಂದ 20 ಸೆಕೆಂಡ್‌ಗಳಷ್ಟು ಸಮುದ್ರದ ಮೇಲ್ವೈಗೆ ಬರುತ್ತವೆ. ಬಳಿಕ ನೀರಿನೊಳಗೆ ಸಾಗಿ ಮೀನುಗಳನ್ನು ಬೇಟೆಯಾಡುತ್ತವೆ. ಈ ಸಸ್ತನಿಗಳು 10ರಿಂದ 12 ತಿಂಗಳು ಗರ್ಭಧಾರಣೆ ಮಾಡುತ್ತವೆ. ಮರಿಗಳು ಸ್ವಾವಲಂಬಿಯಾಗಿ ಜೀವಿಸುವ ತನಕವೂ ಪೋಷಣೆ ಮಾಡುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT