ADVERTISEMENT

ಉತ್ತರ ಕನ್ನಡ: ಮನ್ ಕಿ ಬಾತ್‌ನಲ್ಲಿ ‘ಐಎನ್‌ಎಸ್ ಚಪಲ್’ ಮ್ಯೂಸಿಯಂ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:17 IST
Last Updated 1 ಡಿಸೆಂಬರ್ 2025, 5:17 IST
ಕಾರವಾರದಲ್ಲಿರುವ ಐಎನ್ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ.
ಕಾರವಾರದಲ್ಲಿರುವ ಐಎನ್ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ.   

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿರುವ ‘ಐಎನ್‌ಎಸ್ ಚಪಲ್’ ಯುದ್ಧನೌಕೆ ವಸ್ತು ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದರು.

ನವೆಂಬರ್ ತಿಂಗಳ ಮನದ ಮಾತಿನ ಅವತರಣಿಕೆಯಲ್ಲಿ ದೇಶದ ವಿವಿಧೆಡೆಯಲ್ಲಿರುವ ನೌಕಾದಳಕ್ಕೆ ಸಂಬಂಧಿಸಿದ ವಸ್ತುಸಂಗ್ರಹಾಲಯಗಳ ಕುರಿತು ವಿಷಯ ಪ್ರಸ್ತಾಪಿಸಿದ ಮೋದಿ, ‘ಕಾರವಾರದಲ್ಲಿಯೂ ಯುದ್ಧನೌಕೆ ವಸ್ತು ಸಂಗ್ರಹಾಲಯವಿದೆ. ಅಲ್ಲಿ ನೌಕಾದಳದ ಸಾಮರ್ಥ್ಯ ಬಿಂಬಿಸುವ ಪರಿಕರಗಳನ್ನು ಇಡಲಾಗಿದೆ’ ಎಂದರು.

1971ರ ಇಂಡೋ–ಪಾಕ್ ಯುದ್ಧದ ವೇಳೆ ಬಳಕೆ ಆಗಿದ್ದ ಐಎನ್‌ಎಸ್ ಚಪಲ್ ಯುದ್ಧನೌಕೆ ನಿವೃತ್ತಿಯ ಬಳಿಕ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ. 2005ರಲ್ಲಿ ಕಾರವಾರಕ್ಕೆ ತರಲಾಗಿದ್ದು, 2006ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿಸಲಾಯಿತು. ಕಳೆದ 19 ವರ್ಷಗಳಲ್ಲಿ ಅಂದಾಜು 8 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವಸ್ತುಸಂಗ್ರಹಾಲಯ ವೀಕ್ಷಿಸಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಇದೇ ಸಂಗ್ರಹಾಲಯದ ಪಕ್ಕ ಟುಪಲೇವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯವನ್ನೂ ಸ್ಥಾಪಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.