ADVERTISEMENT

ಕೌಶಲ ತರಬೇತಿ, ಉದ್ಯೋಗ ಮೇಳ 19, 20ರಂದು

ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ಖಾತ್ರಿ ಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 12:13 IST
Last Updated 16 ಜನವರಿ 2019, 12:13 IST
ಕಾರವಾರದಲ್ಲಿ ಆಯೋಜಿಸಲಾಗಿರುವ ಉದ್ಯೋಗ ಮೇಳದ ಮಾಹಿತಿ ಪತ್ರವನ್ನು ಮುಖಂಡರು ಬುಧವಾರ ಬಿಡುಗಡೆ ಮಾಡಿದರು
ಕಾರವಾರದಲ್ಲಿ ಆಯೋಜಿಸಲಾಗಿರುವ ಉದ್ಯೋಗ ಮೇಳದ ಮಾಹಿತಿ ಪತ್ರವನ್ನು ಮುಖಂಡರು ಬುಧವಾರ ಬಿಡುಗಡೆ ಮಾಡಿದರು   

ಕಾರವಾರ:ನಗರದಸೇಂಟ್ಮೈಕಲ್ಸ್ ಶಾಲೆಯ ಆವರಣದಲ್ಲಿಜ.19 ಹಾಗೂ 20ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಆಸಕ್ತರು ಜ.18ರವರೆಗೆ ನೋಂದಣಿ ಮಾಡಿಕೊಳ್ಳಬಹುದುಎಂದು ಜಾಬ್‌ಹಂಟ್ ಸಂಸ್ಥೆಯ ಮುಖ್ಯಸ್ಥ ರಾಜೇಶ ನಾಯ್ಕತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಅರ್ಜಿಗಳು ಬರುತ್ತಿದೆ. 100ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಸುಮಾರುಎಂಟುಸಾವಿರ ಹುದ್ದೆಗಳನ್ನುಭರ್ತಿ ಮಾಡಲಾಗುತ್ತದೆ. ಸಗಟು, ಡಿಜಿಟಲ್ ಮಾರ್ಕೆಟಿಂಗ್, ಎಂಜಿನಿಯರಿಂಗ್, ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ಸಂಸ್ಥೆಗಳು ಪಾಲ್ಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

ಶಾಲೆ ತೊರೆದವರಿಂದಸ್ನಾತಕೋತ್ತರ ಪದವೀಧರರವರೆಗೂಅರ್ಜಿ ಸಲ್ಲಿಸಬಹುದು. ನೋಂದಣಿ ಉಚಿತವಾಗಿದ್ದು, ಈಗಾಗಲೇ 5,000 ಅರ್ಜಿಗಳು ಬಂದಿವೆ. ಒಬ್ಬ ಅಭ್ಯರ್ಥಿ ಎಷ್ಟು ಕಂಪನಿಗಳಿಗೆ ಬೇಕಾದರೂ ಸಂದರ್ಶನ ನೀಡಬಹುದು ಎಂದು ತಿಳಿಸಿದರು.

ADVERTISEMENT

ಆಯ್ಕೆಯಾದವರಿಗೆ ಸ್ಥಳದಲ್ಲೇ ಉದ್ಯೋಗ ಖಾತ್ರಿ ಪತ್ರ ನೀಡಲಾಗುತ್ತದೆ. ವಿದ್ಯಾರ್ಥಿಗಳು ಆಯ್ಕೆಯಾದರೆ ಸಂಸ್ಥೆಗಳು ಕೆಲಸಕ್ಕೆ ಸೇರಲು ಕಾಲಾವಕಾಶ ನೀಡುತ್ತವೆ. ಸಂದರ್ಶನ ಎದುರಿಸಲು ಬೇಕಾಗುವ ಕೌಶಲ ತರಬೇತಿ, ಸ್ವಯಂ ಉದ್ಯೋಗಗಳ ಬಗ್ಗೆ ಮಾಹಿತಿ, ವೃತ್ತಿ ಮಾರ್ಗದರ್ಶನ, ಮೌಲ್ಯಮಾಪನಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆಮೊಬೈಲ್: 90089 49787, 98447 87187, 99455 85140.ಆಸಕ್ತರು ಆನ್‌ಲೈನ್ ನೋಂದಣಿಗೆ http://www.bangalorean.com/jobsregistration ಸಂಪರ್ಕಿಸಬಹುದು ಎಂದರು.

ಅಂಕೋಲಾದಲ್ಲಿ ಪಾಸ್‍ಪೋರ್ಟ್ ಸೇವಾಕೇಂದ್ರ: ಬಿಜೆಪಿ ಜಿಲ್ಲಾ ಘಟಕದ ವಕ್ತಾರ ರಾಜೇಶ ನಾಯಕ ಮಾತನಾಡಿ, ‘ಅಂಕೋಲಾದ ಅಂಚೆ ಕಚೇರಿ ಬಳಿ ಜ.25ರಂದು ಪಾಸ್‍ಪೋರ್ಟ್ ಸೇವಾಕೇಂದ್ರ ಆರಂಭವಾಗಲಿದೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕೆಲವು ತಿಂಗಳ ಹಿಂದೆನೀಡಿದ್ದ ಭರವಸೆ ಈಡೇರಿಸಿದ್ದಾರೆ’ ಎಂದು ತಿಳಿಸಿದರು.

ರೈಲು ಮಾರ್ಗ ಅಗತ್ಯ:‘ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ಡೋಂಗಿಪರಿಸರವಾದಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಅವರಿಗೆ ಜಿಲ್ಲೆಯ ನಿಜವಾದ ಸಮಸ್ಯೆ ಅರಿವಿದೆಯೇ? ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಿಲ್ಲ. ಬದಲಾಗಿ ಜನರಿಗೆ ಅನುಕೂಲವಾಗುತ್ತದೆ. ಸರ್ಕಾರ ಒಂದು ಯೋಜನೆ ರೂಪಿಸುವಾಗಿ ಪರಿಸರದ ಮೇಲಿನ ಮಾರಕ ಮತ್ತು ಪೂರಕ ಪರಿಣಾಮದ ಬಗ್ಗೆ ಮಾಹಿತಿ ಕಲೆ ಹಾಕುವುದಿಲ್ಲವೇ? ಅಡ್ಡಿಪಡಿಸುತ್ತಿರುವವರ ಬಗ್ಗೆರಾಷ್ಟ್ರೀಯ ತನಿಖಾ ದಳದಿಂದ ತನಿಖೆಯಾಗಬೇಕು’ ಎಂದುಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಮನೋಜ್ ಭಟ್, ಮುಖಂಡರಾದ ಕಿಶನ್ ಕಾಂಬ್ಳೆ,ಗಿರೀಶ ನಾಯಕ, ಗುರುಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.