ADVERTISEMENT

ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಅಪಾಯದಲ್ಲಿದೆ: ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 2:53 IST
Last Updated 27 ಜುಲೈ 2025, 2:53 IST
ಅಂಕೋಲಾ ಪಟ್ಟಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರನ್ನು ಹಿರಿಯ ಸಾಹಿತಿಗಳು ಸನ್ಮಾನಿಸಿದರು
ಅಂಕೋಲಾ ಪಟ್ಟಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರನ್ನು ಹಿರಿಯ ಸಾಹಿತಿಗಳು ಸನ್ಮಾನಿಸಿದರು   

ಅಂಕೋಲಾ: ‘ಕನ್ನಡದ ತವರು ನೆಲ ಕರ್ನಾಟಕದಲ್ಲಿಯೇ ಕನ್ನಡ ಭಾಷೆ ಅಪಾಯದಲ್ಲಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಪಟ್ಟಣದ ವೆಸ್ಟರ್ನ್ ಹಿಲ್ಸ್ ಹೋಟೆಲ್ ಸಭಾ ಭವನದಲ್ಲಿಹಿರಿಯ ಸಾಹಿತಿಗಳು, ಚಿಂತಕರು ಹಾಗೂ ಕನ್ನಡಪರ ಸಂಘ ಸಂಸ್ಥೆಗಳಿಂದ ಶುಕ್ರವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಶಿಕ್ಷಣ ಕ್ಷೇತ್ರದಲ್ಲಿ ಪರಭಾಷಾ ವ್ಯಾಮೋಹ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಪರಭಾಷಿಕರ ಅಕ್ರಮಣದಿಂದಾಗಿ ಕನ್ನಡ ಭಾಷೆ ಅಪಾಯದಲ್ಲಿದೆ. ಇಂದಿನ ದಿನಗಳಲ್ಲಿ ಭಾಷಾ ಸ್ವಷ್ಟತೆ ಇಲ್ಲದ ಶಿಕ್ಷಣದಿಂದಾಗಿ ಪುಸ್ತಕಗಳನ್ನು ಓದುವ, ಬರೆಯುವ ಹವ್ಯಾಸಗಳು ಕೂಡಾ ಕಡಿಮೆಯಾಗಿವೆ. ಹೀಗೆಯೇ ಮುಂದುವರಿದರೆ ಕನ್ನಡ ಕೇವಲ ಒಂದು ಮಾತನಾಡುವ ಭಾಷೆಯಾಗಿ ಮಾತ್ರ ಉಳಿಯಲಿದೆ’ ಎಂದರು.

ADVERTISEMENT

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ನಿವೃತ್ತ ಪ್ರಾಚಾರ್ಯ ಡಾ.ಆರ್.ಜಿ. ಗುಂದಿ, ಪ್ರೊ. ಮೋಹನ್ ಹಬ್ಬು, ಮಹಾಂತೇಶ್ ರೇವಡಿ, ಶಿಕ್ಷಕ ಜಗದೀಶ್ ನಾಯಕ, ಪ್ರಾಚಾರ್ಯ ಎಸ್.ವಿ.ವಸ್ತ್ರದ, ಸಾಹಿತಿ ಜೆ. ಪ್ರೇಮಾನಂದ, ನಾಗೇಂದ್ರ ನಾಯಕ, ರಾಜು ಹರಿಕಂತ್ರ, ಮಹೇಶ್ ನಾಯಕ, ಕೆ.ಆರ್. ರಮೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.