ಹಳಿಯಾಳ: ಕಾರ್ಗಿಲ್ ವಿಜಯ್ ದಿವಸದ 25ನೇ ವಾರ್ಷಿಕೋತ್ಸವದ ಅಂಗವಾಗಿ ತಾಲ್ಲೂಕಿನ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ವತಿಯಿಂದ ಮೆರವಣಿಗೆ ನಡೆಸಲಾಯಿತು.
ಶುಕ್ರವಾರ ಸಂಜೆ ಇಲ್ಲಿಯ ಬಸವೇಶ್ವರ ವೃತ್ತದ ಬಳಿ ಮಾಜಿ ಸೈನಿಕರೆಲ್ಲರೂ ಸೇರಿ ಅಲ್ಲಿಂದ ವನಶ್ರೀ ಸರ್ಕಲ್, ಬಸ್ ನಿಲ್ದಾಣ ಮಾರ್ಗವಾಗಿ ಪೇಟೆ ಮುಖ್ಯಬೀದಿಯಿಂದ ಸಾಗಿ ಶಿವಾಜಿ ವೃತ್ತದ ಬಳಿ ಸೇರಿ ಕ್ಯಾಂಡಲ್ ಬೆಳಗಿಸಿದರು.
ಮಾಜಿ ಸೈನಿಕರು ತಮ್ಮ ಅನುಭವ ಹಂಚಿಕೊಂಡರು. ಕಾರ್ಗಿಲ್ ಯುದ್ಧ ಆರಂಭವಾದಾಗಿನಿಂದ ಅಂತಿಮದವರೆಗೆ ಘಟನಾವಳಿಗಳ ಕುರಿತು ವಿವರಿಸಿದರು.
ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿಯ ಹಳಿಯಾಳದ ಅಧ್ಯಕ್ಷ ವಿಠ್ಠಲ ಜುಂಜವಾಡಕರ, ಉಪಾಧ್ಯಕ್ಷ ದೇವೇಂದ್ರ ಸೋನಪ್ಪನವರ, ಪದಾಧಿಕಾರಿಗಳಾದ ವಿಶ್ವನಾಥ ಬೆಣಚೇಕರ, ಉದಯಕುಮಾರ ಚೌಗಲಾ, ಸುರೇಶ ಪಟ್ಟೆಕರ, ಮಂಜುನಾಥ್ ಬೂದಪ್ಪನವರ, ಪರಶುರಾಮ್ ಗೌಡ, ಪುರಸಭೆ ಸದಸ್ಯ ಸತ್ಯಜೀತ ಗಿರಿ, ಮುಖಂಡ ಉಮೇಶ ಬೋಳಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.