ಪ್ರಾತಿನಿಧಿಕ ಚಿತ್ರ
ಕಾರವಾರ: ಅವಧಿ ಪೂರ್ಣಗೊಂಡರೂ ಗ್ರಾಹಕರೊಬ್ಬರ ₹1.20 ಕೋಟಿ ಠೇವಣಿ ಮರಳಿಸಿದ ತಾಲ್ಲೂಕಿನ ಸದಾಶಿವಗಡದ ಆಶ್ರಯ ಸಹಕಾರ ಕ್ರೆಡಿಟ್ ಸೊಸೈಟಿ ವಿರುದ್ಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರದ ಮೂಲದ, ಮುಂಬೈನಲ್ಲಿರುವ ತನುಶ್ರೀ ಗಾಂವಕರ ಸೊಸೈಟಿ ವಿರುದ್ಧ ವಂಚನೆ ದೂರು ನೀಡಿದ್ದಾರೆ. ಸೊಸೈಟಿ ಅಧ್ಯಕ್ಷ ಬಾಬುರಾವ್ ರಾಣೆ, ಉಪಾಧ್ಯಕ್ಷ ಆನಂದು ಗಾಂವಕರ ಸೇರಿದಂತೆ ಏಳು ಮಂದಿ ನಿರ್ದೇಶಕರು ಮತ್ತು ಸೊಸೈಟಿ ಪ್ರತಿನಿಧಿಯಾಗಿದ್ದ ಸಂಧ್ಯಾ ಗಾಂವಕರ ವಿರುದ್ಧ ಠೇವಣಿ ವಂಚಿಸಿದ್ದಾಗಿ ಪಟ್ಟಣದ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನೀಡಿದ ಖಾಸಗಿ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಸೊಸೈಟಿಯಲ್ಲಿ ಸ್ಥಿರ ಠೇವಣಿ, ಮರುಕಳಿಸುವ ಠೇವಣಿಗಳಲ್ಲಿ (ಆರ್‌ಡಿ) ಹಣ ಇರಿಸಲಾಗಿತ್ತು. 2023ರ ಜನವರಿಯಿಂದ 2024ರ ಡಿಸೆಂಬರ್ ಅವಧಿಯಲ್ಲಿ ಅವುಗಳ ಅವಧಿ ಪೂರ್ಣಗೊಂಡಿದೆ. ಆದರೂ, ಸೊಸೈಟಿ ಹಣ ಮರಳಿಸಿಲ್ಲ ಎಂದು ದೂರು ನೀಡಿದ್ದರು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.