ADVERTISEMENT

ಕಾರವಾರ: ತೀರದಲ್ಲಿ ಉಸಿರು ಚೆಲ್ಲಿದ ಹಸಿರು ಸಮುದ್ರ ಆಮೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 16:06 IST
Last Updated 24 ಜೂನ್ 2023, 16:06 IST
ಕಾರವಾರದ ಠಾಗೋರ್ ಕಡಲ ತೀರದಲ್ಲಿ ಉಸಿರು ಚೆಲ್ಲಿದ ಹಸಿರು ಸಮುದ್ರ ಆಮೆ
ಕಾರವಾರದ ಠಾಗೋರ್ ಕಡಲ ತೀರದಲ್ಲಿ ಉಸಿರು ಚೆಲ್ಲಿದ ಹಸಿರು ಸಮುದ್ರ ಆಮೆ   

ಕಾರವಾರ: ಇಲ್ಲಿನ ರವೀಂದ್ರನಾಥ ಠಾಗೋರ ಕಡಲ ತೀರದಲ್ಲಿ ಅಪರೂಪವೆನಿಸಿದ ಹಸಿರು ಸಮುದ್ರ ಆಮೆ (ಗ್ರೀನ್ ಸೀ ಟರ್ಟಲ್) ಮೃತ ಶರೀರ ಕಂಡು ಬಂದಿದೆ. 

ಚೆಲೋನಿಯಾ ಮೈಡಾಸ್ ಎನ್ನುವ ವೈಜ್ಞಾನಿಕ ಹೆಸರಿನ ಆಮೆ ಈ ಭಾಗದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಮೂರು ತಿಂಗಳ ಹಿಂದೆ ಒಮ್ಮೆ ಗ್ರೀನ್ ಸೀ ಟರ್ಟಲ್ ಮೃತ ದೇಹ ಕಂಡು ಬಂದಿದ್ದು, ಇದನ್ನು ಕಡಲ ಜೀವಶಾಸ್ತ್ರ ಅಧ್ಯಯನ ಕೇಂದ್ರದಲ್ಲಿ ಸಂರಕ್ಷಿಸಿ ಇರಿಸಲಾಗಿದೆ. ಇದು ತಿಳಿ ಹಸಿರು ಬಣ್ಣದ ಕಡಲಾಮೆಯಾಗಿದೆ. ಸುಮಾರು 4 ದಿನಗಳ ಹಿಂದೆ ಈ ಆಮೆ ಮೃತಪಟ್ಟಿರಬಹುದು ಎಂದು ಕಡಲ ಜೀವಶಾಸ್ತ್ರ ವಿಭಾಗದ ಪ್ರಾಚಾರ್ಯ ಜಗನ್ನಾಥ ರಾಠೋಡ ತಿಳಿಸಿದ್ದಾರೆ. ಮೃತ ಆಮೆಯ ಮೇಲೆ ಬಿಳಿ ಬಣ್ಣದ ಪರಾವಲಂಬಿ ಜೀವಿಗಳು ಇರುವುದು ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT