ADVERTISEMENT

ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಪತ್ತೆ– ಕೈದಿಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 3:08 IST
Last Updated 16 ಡಿಸೆಂಬರ್ 2025, 3:08 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಕಾರವಾರ: ಇಲ್ಲಿನ ಜಿಲ್ಲಾ ಕಾರಾಗೃಹದ ಮೂರು ಬ್ಯಾರಕ್‌ಗಳಲ್ಲಿ ಭಾನುವಾರ ರಾತ್ರಿ 4 ಸ್ಮಾರ್ಟ್ ಫೋನ್ ಸೇರಿ 9 ಮೊಬೈಲ್, ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ.

ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರ ಸಿಬ್ಬಂದಿಯೊಂದಿಗೆ ತಪಾಸಣೆ ನಡೆಸಿದ ವೇಳೆ 1, 2 ಮತ್ತು 3ನೇ ಬ್ಯಾರಕ್‌ನ ಗೋಡೆಗಳ ಒಳಗೆ, ಹೊರ ಆವರಣದಲ್ಲಿ ಅವಿತಿಟ್ಟಿದ್ದ ಉಪಕರಣಗಳು ಸಿಕ್ಕಿವೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

‘ಕಾರಾಗೃಹದ ಬ್ಯಾರಕ್‌ಗಳಲ್ಲಿ ತಪಾಸಣೆ ಕೈಗೊಂಡ ವೇಳೆ 4 ಆ್ಯಂಡ್ರಾಯ್ಡ್ ಮೊಬೈಲ್‌ಗಳು, 5 ಕೀಪ್ಯಾಡ್ ಮೊಬೈಲ್‌ಗಳು, ಚಾರ್ಜರ್, ಸಿಮ್ ಕಾರ್ಡ್‌ಗಳು, ನೆಕ್ ಬ್ಯಾಂಡ್ ಸೇರಿದಂತೆ ಹಲವು ಉಪಕರಣಗಳು ಸಿಕ್ಕಿವೆ ಎಂದು ಕಾರಾಗೃಹದ ಅಧಿಕ್ಷಕರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾರಾಗೃಹದಲ್ಲಿ ಪದೇ ಪದೇ ತಗಾದೆ ತೆಗೆದು ಗಲಾಟೆ ಮಾಡುತ್ತಿದ್ದ ಮಂಗಳೂರು ಕಾರಾಗೃಹದಿಂದ ಬಂದಿದ್ದ 7 ಕೈದಿಗಳ ಪೈಕಿ 4 ಮಂದಿಯನ್ನು ಕಲಬುರ್ಗಿ, ಬಳ್ಳಾರಿ ಮತ್ತು ಹಿಂಡಲಗಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ಕಾರಾಗೃಹ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.