ADVERTISEMENT

ಹಿರಿಯ ವ್ಯಕ್ತಿಯೊಬ್ಬರ ಶವ ಶೌಚಾಲಯದಲ್ಲಿ ಪತ್ತೆ: ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 6:01 IST
Last Updated 16 ಸೆಪ್ಟೆಂಬರ್ 2019, 6:01 IST
   

ಕಾರವಾರ: ತಾಲ್ಲೂಕಿನ ಅಂಗಡಿ ಗ್ರಾಮದಲ್ಲಿ ಹಿರಿಯರೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ.

ನಿವೃತ್ತ ಅರಣ್ಯ ಪಾಲಕ ಜಾನ್ ಅಂತೋನಿ ಫರ್ನಾಂಡಿಸ್ (81) ಮೃತರು. ಅವರ ಮನೆಯ ಶೌಚಾಲಯದಲ್ಲಿ ಶವ ಪತ್ತೆಯಾಗಿದೆ. ಅವರ ಕುತ್ತಿಗೆಯ ಭಾಗದಲ್ಲಿ ಹರಿತವಾದ ವಸ್ತುವಿನಿಂದ ಇರಿದ ರೀತಿಯ ಗಾಯಗಳು ಕಂಡುಬಂದಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.