ADVERTISEMENT

ಕಾಬೂಲ್‌ನಿಂದ ಮರಳಿ ಬಂದ ಕಾರವಾರಿಗ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 15:21 IST
Last Updated 29 ಆಗಸ್ಟ್ 2021, 15:21 IST
ಹೇಮಂತ ಕಾಂಬ್ಳೆ
ಹೇಮಂತ ಕಾಂಬ್ಳೆ   

ಕಾರವಾರ: ಅಫ್ಗಾನಿಸ್ತಾನದಲ್ಲಿ ಉದ್ಯೋಗದಲ್ಲಿದ್ದ ತಾಲ್ಲೂಕಿನ ಕಡವಾಡದ ಹೇಮಂತ ಕಾಂಬ್ಳೆ ಶನಿವಾರ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಅವರು ಕಾಬೂಲ್‌ನಲ್ಲಿ ಅಮೆರಿಕ ಸೇನಾ ಶಿಬಿರದಲ್ಲಿ ಕೆಲಸ ಮಾಡುತ್ತಿದ್ದರು.

ತಾಲಿಬಾನ್ ಉಗ್ರರು ಕಾಬೂಲ್ ನಗರವನ್ನು ವಶಪಡಿಸಿಕೊಂಡ ಬಳಿಕ ಅಮೆರಿಕದ ಸೇನೆಯ ನೆರವಿನಿಂದ ದುಬೈಗೆ ತೆರಳಿದರು. ಅಲ್ಲಿಂದ ದೆಹಲಿಗೆ ಪ್ರಯಾಣಿಸಿ, ನಂತರ ಗೋವಾಕ್ಕೆ ತಲುಪಿದರು. ಅಲ್ಲಿಂದ ಮನೆಗೆ ಬಂದರು. ಕಾಬೂಲ್ ವಿಮಾನ ನಿಲ್ದಾಣವನ್ನು ಅಮೆರಿಕದ ಸಾವಿರಾರು ಸೈನಿಕರು ಸುತ್ತುವರಿದಿದ್ದರು. ಹೊರಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿರಲಿಲ್ಲ. ಸಾಕಷ್ಟು ಭದ್ರತೆಯಿದ್ದ ಕಾರಣ ಬರಲು ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT