ADVERTISEMENT

ಕಿಸಾನ್ ಸಮ್ಮಾನ್ ನಿಧಿಗೆ ನೋಂದಣಿ: ರಾಜ್ಯದಲ್ಲಿ ಕಾರವಾರ ಜಿಲ್ಲೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 20:00 IST
Last Updated 16 ಜುಲೈ 2019, 20:00 IST
ಡಾ.ಕೆ.ಹರೀಶಕುಮಾರ್
ಡಾ.ಕೆ.ಹರೀಶಕುಮಾರ್   

ಕಾರವಾರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಜಿಲ್ಲೆಯಲ್ಲಿ ಶೇ101.92ರಷ್ಟು ರೈತರು ನೋಂದಾಯಿಸಿಕೊಂಡಿದ್ದಾರೆ. ಆಮೂಲಕ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆಎಂದುಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ಹೇಳಿದ್ದಾರೆ.

‘ಈಯೋಜನೆಯ ಅಡಿ ರೈತರನ್ನು ನೋಂದಾಯಿಸಲುರಾಜ್ಯದ ಎಲ್ಲ ಜಿಲ್ಲೆಗಳಿಗೆ ಗುರಿ ನೀಡಲಾಗಿತ್ತು. ಅದರಂತೆ, ಜುಲೈ 15ರ ವರದಿಯಂತೆ ರಾಜ್ಯದಎಲ್ಲ ಜಿಲ್ಲೆಗಳ ಪೈಕಿ ಉತ್ತರ ಕನ್ನಡಮೊದಲಸ್ಥಾನದಲ್ಲಿದೆ. ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯ ಪರಿಶ್ರಮದಿಂದಈದಾಖಲೆ ಸಾಧ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘2015- 16ರ ಕೃಷಿ ಗಣತಿಯಂತೆ ಜಿಲ್ಲೆಯಲ್ಲಿ ಒಟ್ಟು 1,99,241 ಹಿಡುವಳಿದಾರರಿದ್ದು, ಈ ಪೈಕಿ 54,278 ಹಿಡುವಳಿದಾರರನ್ನು ಅನರ್ಹರೆಂದು ಗುರುತಿಸಲಾಗಿದೆ. ಪರಿಷ್ಕೃತಗೊಳಿಸಿದ ಪಟ್ಟಿಯಂತೆ1,44,963 ಗುರಿಯಲ್ಲಿ 1,47,751 ರೈತರನ್ನು ಪಿಎಂ ಕಿಸಾನ್ ಯೋಜನೆಯ ಅಡಿನೋಂದಾಯಿಸಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಕೃಷಿ ಇಲಾಖೆಯಜಂಟಿ ನಿರ್ದೇಶಕ ಹೊನ್ನಪ್ಪಗೌಡ, ‘ರೈತರ ಅನುಕೂಲಕ್ಕಾಗಿಯೇ ಹೊಸದಾಗಿ ಪ್ರತ್ಯೇಕವೆಬ್ಸೈಟ್‌ಒಂದನ್ನು ಪರಿಚಯಿಸಲಾಗಿದೆ. ಹೊರಭಾಗದಲ್ಲಿರುವ ರೈತರು ಇ ದರಲ್ಲೇ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಿಂದ ಹೊರಗಿರುವ ರೈತರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.