ADVERTISEMENT

ಕುಮಟಾ: ಹದಿನೈದು ನಾಡ ಹಂದಿಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 4:03 IST
Last Updated 7 ಡಿಸೆಂಬರ್ 2024, 4:03 IST
ಕುಮಟಾ ಪಟ್ಟಣದ ರೈಲು ನಿಲ್ದಾಣ ರಸ್ತೆಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ನಾಡ ಹಂದಿಗಳನ್ನು ಪುರಸಭೆ ವತಿಯಿಂದ ಹಿಡಿದು ಬೇರೆಡೆ ಸಾಗಿಸಲಾಯಿತು
ಕುಮಟಾ ಪಟ್ಟಣದ ರೈಲು ನಿಲ್ದಾಣ ರಸ್ತೆಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ನಾಡ ಹಂದಿಗಳನ್ನು ಪುರಸಭೆ ವತಿಯಿಂದ ಹಿಡಿದು ಬೇರೆಡೆ ಸಾಗಿಸಲಾಯಿತು   

ಕುಮಟಾ: ಪಟ್ಟಣದ ಆಭರಣ ಜ್ಯುವೆಲ್ಲರಿ ಮಳಿಗೆ, ವರದಾ ಹೊಟೇಲ್ ಹಾಗೂ ಗೋವರ್ಧನ ಹೋಟೆಲ್ ಹಿಂಭಾಗದ ಚೌಡೇಶ್ವರಿ ದೇವಾಲಯದ ಬಳಿ, ಕೊಂಕಣ ರೇಲ್ವೆ ನಿಲ್ದಾಣ ರಸ್ತೆ ಸುತ್ತಮುತ್ತ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಹದಿನೈದು ನಾಡ ಹಂದಿಗಳನ್ನು ಹಿಡಿದು ಸ್ಥಳೀಯ ಪುರಸಭೆ ದೂರದ ಊರಿಗೆ ಕಳಿಸುವ ಕ್ರಮ ಕೈಕೊಂಡಿತು.

ಪಟ್ಟಣದ ಗಾಂಧಿನಗರ ನಿವಾಸಿ ಅಣ್ಣಪ್ಪ ಎಂಬುಬಬರು ಹಂದಿ ಮರಿಗಳನ್ನು ತಂದು ಸಾಕಿ, ದೊಡ್ಡದಾದ ನಂತರ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಹಂದಿಗಳು ಆಹಾರ ಹುಡುಕಲು ರಸ್ತೆಗಳಲ್ಲಿ ಓಡಾಡುವಾಗ ಬೈಕ್ ಸವಾರಿಗೆ ಅಡ್ಡ ಬಂದು ಅಪಘಾತ ಉಂಟಾಗಿವೆ. ಎಷ್ಟೋ ಸಲ ಸುತ್ತಲಿನ ಮನೆಗಳ ಕಾಂಪೌಡ್ ಒಳಗೆ ನುಗ್ಗಿ ಗಲೀಜು ಮಾಡಿ ತೊಂದರೆ ಕೊಡುತ್ತಿರುವ ಬಗ್ಗೆ ಸಮೀಪದ ಜಯರಾಮ ಗುನಗ ಎನ್ನುವವರು ದೂರಿದ್ದರು.

ಈ ಹಿನ್ನೆಲೆಯಲ್ಲಿ ಹಂದಿ ಮಾಲೀಕ ಅಣ್ಣಪ್ಪ ಅಂಬಿ ಅವರಿಗೆ ಸೂಕ್ತ ಕ್ರಮಕ್ಕಾಗಿ ಒಂದು ವರ್ಷದ ಹಿಂದೆಯೇ ಪತ್ರಗಳನ್ನು ಬರೆದು ತಿಳಿಸಲಾಗಿದ್ದರೂ, ಯಾವುದೇ ಕ್ರಮ ಕೈಕೊಂಡಿರಲಿಲ್ಲ.

ADVERTISEMENT

‘ತುಮಕೂರಿನ ತಂಡ ಹದಿನೈದು ನಾಡ ಹಂದಿಗಳನ್ನು ಹಿಡಿದುಕೊಂಡು ಹೋಗಿದೆ. ಉಳಿದವು ಓಡಿ ಹೋಗಿ ಪೊದೆಗಳಲ್ಲಿ ಅಡಗಿಕೊಂಡಿವೆ. ಹಂದಿಗಳನ್ನು ಹಿಡಿದು ವಾಹನಗಳಿಗೆ ತುಂಬುವ ತಂಡಕ್ಕೆ ಸೂಕ್ತ ರಕ್ಷಣೆ ಸಹ ನೀಡಲಾಗಿತ್ತು’ ಎಂದು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ವೀಣಾ ಕಾರವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.