ಸಿದ್ದಾಪುರ: ಪಟ್ಟಣದ ರವೀಂದ್ರ ನಗರ ನಿವಾಸಿ ವಿಜಯ ನಾರಾಯಣ ಹೆಗಡೆ ಅವರ ಮನೆಯ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ತಾಗಿ ಬೆಂಕಿ ಹತ್ತಿಕೊಂಡ ಘಟನೆ ಮಂಗಳವಾರ ನಡೆದಿದೆ.
ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಮಳೆ ಸುರಿದಿದ್ದು ಅಂದಾಜು ಮಧ್ಯಾಹ್ನ 3.30ಕ್ಕೆ ಮರಕ್ಕೆ ಸಿಡಿಲು ತಾಗಿ ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡಿತು. ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದಾಗ ಅವರು, ‘ನಮ್ಮ ಬಳಿ ಅಗ್ನಿಶಾಮಕ ವಾಹನ ಇಲ್ಲ’ ಎಂದು ತಿಳಿಸಿದರು. ಕಾರಣ ಕೇಳಿದಾಗ ‘ನಮ್ಮ ವಾಹನಕ್ಕೆ 17 ವರ್ಷ ಆಗಿದ್ದು ಪಾಸಿಂಗ್ ಆಗಿಲ್ಲ. ಆದಕಾರಣ ನಾವು ಗಾಡಿಯನ್ನು ಹೊರಗೆ ಹಾಕಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು. ಬೆಂಕಿ ತೀವ್ರತೆ ಜಾಸ್ತಿ ಆದರೆ ಕರೆ ಮಾಡಿ ನಾವು ಸೊರಬ ಅಥವಾ ಶಿರಸಿಯಿಂದ ಗಾಡಿ ತರಿಸಿ ಬೆಂಕಿ ನಂದಿಸುತ್ತೇವೆ ಎಂದು ಉತ್ತರಿಸಿದರು. ವಾಸ ಸ್ಥಳದಲ್ಲಿ ಅಥವಾ, ಜನದಟ್ಟಣೆ ಇರುವಲ್ಲಿ ಅಗ್ನಿ ಅವಘಡವಾದರೆ ಸೊರಬ ಅಥವಾ ಶಿರಸಿಯಿಂದ ಅಗ್ನಿಶಾಮಕ ವಾಹನ ಬರುವ ವೇಳೆಗೆ ಪರಿಸ್ಥಿತಿ ಕೈ ಮೀರಿ ಹೋಗಬಹುದು. ಹೀಗಾಗಿ ಶಾಸಕರು ಹಾಗೂ ಉಸ್ತುವಾರಿ ಸಚಿವರು ತಾಲ್ಲೂಕಿಗೆ ಅಗ್ನಿಶಾಮಕ ವಾಹನ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿಜಯ ನಾರಾಯಣ ಹೆಗಡೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.