ADVERTISEMENT

ಶಿರಸಿ | ಲಾಕ್‌ಡೌನ್: ಎಲ್ಲವೂ ಬಂದ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 16:30 IST
Last Updated 19 ಜುಲೈ 2020, 16:30 IST
ಸದಾ ವಾಹನ ಸಂಚಾರವಿರುತ್ತಿದ್ದ ಶಿರಸಿಯ ಯಲ್ಲಾಪುರ ನಾಕಾದಲ್ಲಿ ಭಾನುವಾರ ರಸ್ತೆ ಖಾಲಿಯಾಗಿತ್ತು
ಸದಾ ವಾಹನ ಸಂಚಾರವಿರುತ್ತಿದ್ದ ಶಿರಸಿಯ ಯಲ್ಲಾಪುರ ನಾಕಾದಲ್ಲಿ ಭಾನುವಾರ ರಸ್ತೆ ಖಾಲಿಯಾಗಿತ್ತು   

ಶಿರಸಿ: ಕೋವಿಡ್ 19 ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿರುವ ಭಾನುವಾರದ ಲಾಕ್‌ಡೌನ್‌ಗೆ ತಾಲ್ಲೂಕಿನ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹಿಂದಿನ ಎರಡು ವಾರಗಳಂತೆಯೇ ಈ ವಾರ ಕೂಡ ರಸ್ತೆಯಲ್ಲಿ ಜನಸಂಚಾರ ತೀರಾ ವಿರಳವಾಗಿತ್ತು.

ಹಾಲು, ಕೆಲವು ಔಷಧ ಅಂಗಡಿ ಹೊರತುಪಡಿಸಿ, ಇನ್ನುಳಿದ ಎಲ್ಲ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ರಿಕ್ಷಾ, ಸಾರಿಗೆ ಸಂಸ್ಥೆ ಬಸ್ ಸಂಚಾರ ಇರಲಿಲ್ಲ. ತೀರಾ ತುರ್ತು ಕೆಲಸ ಇದ್ದವರು ಮಾತ್ರ ರಸ್ತೆಯಲ್ಲಿ ಸಂಚರಿಸಿದ್ದು ಕಂಡುಬಂತು. ಮುಸ್ಸಂಜೆಯಲ್ಲಿ ವಾಕಿಂಗ್‌ ಹೋಗುವ ಕೆಲವು ಹಿರಿಯ ನಾಗರಿಕರು ಮಾತ್ರ ಅಲ್ಲಲ್ಲಿ ಕಂಡರು.

ತರಕಾರಿ ಮಾರುಕಟ್ಟೆ ಬಂದ್ ಆಗಿತ್ತು. ಸದಾ ಜನರಿಂದ ತುಂಬಿರುತ್ತಿದ್ದ ಹಳೇ ಬಸ್ ನಿಲ್ದಾಣ ವೃತ್ತ, ಶಿವಾಜಿ ಚೌಕ, ಐದು ರಸ್ತೆ ವೃತ್ತ, ದೇವಿಕೆರೆ, ಅಶ್ವಿನಿ ವೃತ್ತ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಬರಿದಾದ ರಸ್ತೆಗಳು ಮಾತ್ರ ಕಾಣುತ್ತಿದ್ದವು. ಗ್ರಾಮೀಣ ಪ್ರದೇಶಗಳಲ್ಲೂ ಇದೇ ಚಿತ್ರಣವಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.