ಮುಂಡಗೋಡ: ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ, ಮೂರು ಜೋಡಿ ದಂಪತಿಗಳು ಮತ್ತೆ ಒಂದಾದರು. ನ್ಯಾಯಾಧೀಶೆ ಅಕ್ಷತಾ ಸಿ.ಆರ್ ಹಾಗೂ ನ್ಯಾಯಕೇತರ ಸಂಧಾನಕಾರ ವಕೀಲ ಎನ್.ಎ.ನಿಂಬಾಯಿ ಸೇರಿದಂತೆ ಹಿರಿಯ ವಕೀಲರ ಸಮ್ಮುಖದಲ್ಲಿ ದಂಪತಿಗಳು ಕಹಿ ಮರೆತು ಹೊಸ ಜೀವನಕ್ಕೆ ಸಾಕ್ಷಿಯಾದರು.
4 ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, 19 ಎನ್.ಐ ಆಕ್ಟ್ ಪ್ರಕರಣಗಳು, 3 ಮನಿ ರಿಕವರಿ ದಾವೆಗಳು, 6 ಮೂಲದಾವಾ, 18 ಅಮಲ್ಜಾರಿ ಪ್ರಕರಣಗಳು ಸೇರಿ ಒಟ್ಟು 288 ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡವು.
ಸಹಾಯಕ ಸರ್ಕಾರಿ ಅಭಿಯೋಜಕ ಪ್ರಸಾದ ಹೆಗಡೆ, ವಕೀಲರಾದ ಕೆ.ಎನ್.ಹೆಗಡೆ, ಆರ್.ಎನ್.ಹೆಗಡೆ, ಬಿ.ಎಫ್.ಪೂಜಾರ, ಸಿ.ಎಸ್.ಗಾಣಿಗೇರ, ಗುಡ್ಡಪ್ಪ ಕಾತೂರ, ಎಂ.ಎ.ನಂದಿಗಟ್ಟಿ, ಸುಜೀತ ಸದಾನಂದ, ನಟರಾಜ ಕಾತೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.