ADVERTISEMENT

ಭಾಗವತಿ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ: ವಾಹನ ಸವಾರರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 14:02 IST
Last Updated 19 ಫೆಬ್ರುವರಿ 2026, 14:02 IST
<div class="paragraphs"><p>ಒಂಟಿ ಸಲಗ</p></div>

ಒಂಟಿ ಸಲಗ

   

ದಾಂಡೇಲಿ: ತಾಲ್ಲೂಕಿನ ಭಾಗವತಿ ಗ್ರಾಮದ ಹತ್ತಿರ ಒಂಟಿ ಸಲಗದ ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಗುರುವಾರ ಮಧ್ಯಾಹ್ನ ಈ ಗ್ರಾಮ ಸಮೀಪದ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಂಡ ಆನೆ ಸುಮಾರು ಅರ್ಧ ಗಂಟೆ ಕಾಲ ಮಧ್ಯದಲ್ಲೇ ನಿಂತು ವಾಹನ ಸವಾರರಿಗೆ ಆಂತಕ ಉಂಟು ಮಾಡಿ ಸಂಚಾರಕ್ಕೆ ತೊಂದರೆಯಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಕೆಲ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆ ಮಧ್ಯದಲ್ಲೇ ಬಿಟ್ಟು ಸ್ಥಳದಿಂದ ದೂರ ಹೋಗಿದ್ದಾಗಿಯೂ ತಿಳಿಸಿದ್ದಾರೆ. ಆನೆ ಕಾಡಿನ ಕಡೆಗೆ ತೆರಳಿದ ಬಳಿಕ ವಾಹನ ಸಂಚಾರ ಸಹಜ ಸ್ಥಿತಿಗೆ ಬಂದಿದೆ.

ಕಳೆದ ಒಂದು ವಾರದಿಂದ ಭಾಗವತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಸಂಚಾರ ಹೆಚ್ಚಾಗಿರುವುದರಿಂದ ಸ್ಥಳೀಯರು ಹಾಗೂ ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.