
ದಾಂಡೇಲಿ: ರೋಟರಿ ಕ್ಲಬ್ ದಾಂಡೇಲಿ ಘಟಕ ಮತ್ತು ಯು.ಕೆ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಇಲ್ಲಿನ ಹಳೆ ನಗರಸಭೆ ಮೈದಾನದಲ್ಲಿ ಈಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ದಾವಣಗೆರೆಯ ಮಂಜುನಾಥ ಎಸ್. ಮಿಸ್ಟರ್ ದಾಂಡೇಲಿ ಕಿರೀಟ ಮುಡಿಗೇರಿಸಿಕೊಂಡರು.
ಮಿಸ್ಟರ್ ದಾಂಡೇಲಿ ಸೀಸನ್–2 ಪ್ರಶಸ್ತಿಯನ್ನು ದಾವಣಗೇರಿಯ ಮಂಜುನಾಥ ಎಸ್. ಹಾಗೂ ಮೊದಲ ರನ್ನರ್ ಅಪ್ ಬೆಳಗಾವಿಯ ಪ್ರಶಾಂತ್ ಕನ್ನುಕರ, ಎರಡನೇ ರನ್ನರ ಅಫ್ ಆಗಿ ಉತ್ತರ ಕನ್ನಡದ ಅಮನ್ ಶೇಖ್, ಅತ್ಯುತ್ತಮ ಪೋಸರ್ ಪ್ರಶಸ್ತಿಯನ್ನು ಬೆಳಗಾವಿಯ ಉಮೇಶ್ ಗಣಪತಿ ಪಡೆದುಕೊಂಡರು.
ಸ್ಪರ್ಧೆಗೆ ಚಾಲನೆ ನೀಡಿದ್ದ ಶಾಸಕ ಆರ್.ವಿ.ದೇಶಪಾಂಡೆ , ‘ಆರೋಗ್ಯವೇ ಭಾಗ್ಯವಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ದೇಹದಾರ್ಢ್ಯ ನಡೆಸುವುದು ಅನಿವಾರ್ಯ’ ಎಂದರು.
ವೇದಿಕೆಯಲ್ಲಿ ರಾಜೀವ್ ಪೆಜ್ಜೋಳಿ, ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್, ಗೋವಾದ ದೇಹದಾರ್ಢ್ಯಪಟು ನಾವಿಕ, ರೋಟರಿ ಕಾರ್ಯದರ್ಶಿ ಮಿಥುನ್ ನಾಯಕ್ ಮತ್ತು ಸಂಘಟಕರಾದ ಯೂಸುಫ್ ಶೇಖ್, ಬಿಲಾಲ್ ಎಚ್.ಜೆ., ನವೀದ್ ಸತ್ಗರ ಪಾಲ್ಗೊಂಡಿದ್ದರು. ವಿವಿಧ ಜಿಲ್ಲೆಗಳಿಂದ 150 ಕ್ಕೂ ಹೆಚ್ಚು ಬಾಡಿ ಬಿಲ್ಡರ್‌ಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.