
ಪ್ರಜಾವಾಣಿ ವಾರ್ತೆ
ಬಂಧನ (ಸಾಂದರ್ಭಿಕ ಚಿತ್ರ)
ಭಟ್ಕಳ: ಪಟ್ಟಣದ ಗುಳ್ಮಿ ಕ್ರಾಸ್ ಪಶು ಆಸ್ಪತ್ರೆ ಎದುರು ಗಾಂಜಾ ಸೇವನೆ ಮಾಡಿದ ಮೂವರು ಆರೋಪಿಗಳನ್ನು ಶಹರ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತಾಲ್ಲೂಕಿನ ಬೆಂಡೆಕಾನ್ ನಿವಾಸಿ ಕೆ.ಅಬ್ದುಲ್ ಸಲಾಂ (47), ಗುಳ್ಮಿ ಅಬುಜರ್ ಕಾಲೋನಿ ನಿವಾಸಿ ಮಹ್ಮದ್ ಶಬ್ಬಿರ್ (52) ಹಾಗೂ ಹಾಲಿ ಚೌಥನಿ ನಿವಾಸಿ ಮಹ್ಮದ್ ಅಕ್ರಂ (25) ಬಂಧಿತರು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.