ADVERTISEMENT

ಮುಂಡಗೋಡ: ಫೆ.3ರಿಂದ ಮಾರಿಕಾಂಬಾ ಜಾತ್ರೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 4:39 IST
Last Updated 5 ಸೆಪ್ಟೆಂಬರ್ 2025, 4:39 IST
ಮುಂಡಗೋಡ ಪಟ್ಟಣದ ಮಾರಿಕಾಂಬಾ ದೇವಿಯ 7ನೇ ಜಾತ್ರಾ ಮಹೋತ್ಸವದ ಕರಪತ್ರವನ್ನು ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ, ಸದಸ್ಯರು ಗುರುವಾರ ಬಿಡುಗಡೆ ಮಾಡಿದರು
ಮುಂಡಗೋಡ ಪಟ್ಟಣದ ಮಾರಿಕಾಂಬಾ ದೇವಿಯ 7ನೇ ಜಾತ್ರಾ ಮಹೋತ್ಸವದ ಕರಪತ್ರವನ್ನು ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ, ಸದಸ್ಯರು ಗುರುವಾರ ಬಿಡುಗಡೆ ಮಾಡಿದರು   

ಮುಂಡಗೋಡ: ಪಟ್ಟಣದ ಗ್ರಾಮದೇವಿ ಮಾರಿಕಾಂಬಾ ದೇವಿಯ 7ನೇ ಜಾತ್ರಾ ಮಹೋತ್ಸವವನ್ನು 2026ರ ಫೆ.3ರಿಂದ ಫೆ.11ರವರೆಗೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾರಿಕಾಂಬಾ ದೇವಸ್ಥಾನ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ರಮೇಶ ಕಾಮತ ಹೇಳಿದರು.

ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಜಾತ್ರೆ ಅಂಗವಾಗಿ ಐದು ಹೊರಬೀಡು ಆಚರಿಸಲಾಗುವುದು. ಮೊದಲನೇ ಹೊರಬೀಡು ಜ.13ರಂದು ನಡೆಯಲಿದೆ. ನಂತರ ಶುಕ್ರವಾರ, ಮಂಗಳವಾರ ದಿನಗಳಂದು ಒಟ್ಟು ಐದು ಹೊರಬೀಡು ಆಚರಿಸಲಾಗುವುದು. ಕೊನೆಯ ಹೊರಬೀಡು ಜ.27ರಂದು ನಡೆಯಲಿದೆ’ ಎಂದರು.

ಕಾರ್ಯಕ್ರಮಗಳ ವಿವರ:

ADVERTISEMENT

ಫೆ.3– ತಾಳಿ ಕಟ್ಟುವ ಶಾಸ್ತ್ರ, ಪೂಜಾ ವಿಧಾನಗಳು, ಫೆ.4ರಂದು ಬೆಳಿಗ್ಗೆ 8ಗಂಟೆಯಿಂದ ಅಮ್ಮನವರ ರಥೋತ್ಸವ ಆರಂಭ, ಮಧ್ಯಾಹ್ನ 1.30ಕ್ಕೆ ಚೌತಮನೆಯಲ್ಲಿ ಪ್ರತಿಷ್ಠಾಪನೆ. ಫೆ.5ರಿಂದ ಫೆ.11ರವರೆಗೆ ಉಡಿ ತುಂಬುವ ಸೇವೆಗಳು ಇರುತ್ತದೆ. ಫೆ.11ರಂದು ಮಧ್ಯಾಹ್ನ 4ಗಂಟೆಯಿಂದ ವಿಸರ್ಜನಾ ಕಾರ್ಯಕ್ರಮ. ಮಾ.20ರ ಯುಗಾದಿಯಂದು ಅಮ್ಮನವರ ಮರುಪ್ರತಿಷ್ಠಾಪನೆ ನಡೆಯಲಿದೆ. ಜ.13ರಿಂದ ಮಾ.19ರವರೆಗೆ ಮುಂಡಗೋಡ, ನ್ಯಾಸರ್ಗಿ ಹಾಗೂ ಕಾಳಗನಕೊಪ್ಪ ಭಕ್ತರು ಯಾವುದೇ ಶುಭಕಾರ್ಯಗಳನ್ನು ಮಾಡುವಂತಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.