ADVERTISEMENT

ಎಂಇಎಸ್ ಕಾಲೇಜು: ಶೇ 100ರ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 15:26 IST
Last Updated 14 ಜುಲೈ 2020, 15:26 IST
ರಶ್ಮಿ ಗೌಡ (ಪ್ರಥಮ)
ರಶ್ಮಿ ಗೌಡ (ಪ್ರಥಮ)   

ಶಿರಸಿ: ಇಲ್ಲಿನ ಎಂಇಎಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ 100ರಷ್ಟಾಗಿದೆ. 344 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿಜ್ಞಾನ ವಿಭಾಗದಲ್ಲಿ ಪವನ್ ಹೆಗಡೆ (ಶೇ 98.3) ಪ್ರಥಮ, ಚಿನ್ಮಯ ಹೆಗಡೆ ಮತ್ತು ಕವನಾ ಹೆಗಡೆ (ಶೇ 98) ದ್ವಿತೀಯ, ನಚಿಕೇತ ಹೆಗಡೆ (ಶೇ 97) ತೃತೀಯ, ವಾಣಿಜ್ಯ ವಿಭಾಗದಲ್ಲಿ ಸುದೀಪ ಹೆಗಡೆ (ಶೇ 98.3) ಪ್ರಥಮ, ಸುಮಾ ಹೆಗಡೆ (ಶೇ 97.6) ದ್ವಿತೀಯ, ನವ್ಯಾ ಭಟ್ಟ (ಶೇ 97.5) ತೃತೀಯ ಸ್ಥಾನ, ಕಲಾ ವಿಭಾಗದಲ್ಲಿ ಅನಘಾ ಹೆಗಡೆ (ಶೇ 95.8) ಪ್ರಥಮ, ಚಿತ್ರಕನ್ಯಾ ಎಂ (ಶೇ 95.01) ದ್ವಿತೀಯ, ಸಿಂಧು ಹೆಗಡೆ (ಶೇ 93.3) ತೃತೀಯ ಸ್ಥಾನ ಪಡೆದಿದ್ದಾರೆ.

ರಶ್ಮಿ ರಾಜ್ಯಕ್ಕೆ ಐದನೇ ಸ್ಥಾನ:

ಇಲ್ಲಿನ ಎಂಇಎಸ್ ಚೈತನ್ಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ 94.5ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 297 ವಿದ್ಯಾರ್ಥಿಗಳಲ್ಲಿ 97 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 152 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ADVERTISEMENT

ವಿಜ್ಞಾನ ರಶ್ಮಿ ಗೌಡ (ಶೇ 98.3) ಪ್ರಥಮ, ವಿವೇಕ ಹೆಗಡೆ ಮತ್ತು ವಿರಾಜ್ ಭಟ್ಟ (ಶೇ 97) ದ್ವಿತೀಯ, ಜಾಗೃತಿ ಭಟ್ಟ (ಶೇ 96.6) ತೃತೀಯ, ವಾಣಿಜ್ಯ ವಿಭಾಗದಲ್ಲಿ ಕೃತಿಕಾ ಎನ್ (ಶೇ 97) ಪ್ರಥಮ, ಸುಗುಣಾ ಹೆಗಡೆ (ಶೇ 96.5) ದ್ವಿತೀಯ, ವಿಜೇತ ಹೆಗಡೆ (ಶೇ 95.7) ತೃತೀಯ ಸ್ಥಾನ ಪಡೆದಿದ್ದಾರೆ. ಗಣಿತ ವಿಷಯದಲ್ಲಿ 11 ವಿದ್ಯಾರ್ಥಿಗಳು, ಭೌತ ವಿಜ್ಞಾನ ಐವರು, ರಸಾಯನ ವಿಜ್ಞಾನದಲ್ಲಿ ನಾಲ್ವರು, ಸಂಸ್ಕೃತದಲ್ಲಿ ನಾಲ್ವರು, ಅಕೌಂಟೆನ್ಸಿ ಆರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

ಬನವಾಸಿ: ಶೇ 79.31 ಫಲಿತಾಂಶ

ತಾಲ್ಲೂಕಿನ ಬನವಾಸಿ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ 79.31ರಷ್ಟಾಗಿದೆ. ಕಲಾ ವಿಭಾಗದಲ್ಲಿ ಅನಿತಾ ಕೋಟೇಶ್ವರ ಜೋಗಿ (ಶೇ 83.66) ಪ್ರಥಮ, ಕಾವ್ಯಾ ಅರಸನಾಳ್ (ಶೇ 83.33) ದ್ವಿತೀಯ, ಸಂಗೀತಾ ಭಜಂತ್ರಿ (ಶೇ 80.33) ತೃತೀಯ, ವಾಣಿಜ್ಯ ವಿಭಾಗದಲ್ಲಿ ದೀಪಿಕಾ ಬಸವರಾಜ ಗೌಡ (ಶೇ 88.83) ಪ್ರಥಮ, ಪ್ರಿಯಾಂಕಾ ನಾಗರಾಜ ಜೋಗಿ (ಶೇ 88.66) ದ್ವಿತೀಯ, ಮಧುಮತಿ ಅಣ್ಣಪ್ಪ ನಾಯ್ಕ (ಶೇ 85.83) ತೃತೀಯ, ವಿಜ್ಞಾನ ವಿಭಾಗದಲ್ಲಿ ವರ್ಷಾ ಬಾಂದೇಕರ (ಶೇ 89.66) ಪ್ರಥಮ, ನಾಜ್ನೀನ್‌ ಬಾನು ಬಸೀರ್ ಅಹಮ್ಮದ್ (ಶೇ 86.83) ದ್ವಿತೀಯ, ಸಾಮ್ಯುಯಲ್ ಫಿಲಿಪ್ ಡಿಸೋಜಾ (ಶೇ 85.33) ತೃತೀಯ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.