ADVERTISEMENT

ಉತ್ತರ ಕನ್ನಡ: ರಸ್ತೆ, ಸೇತುವೆ ದುರಸ್ತಿಗೆ ಶಾಸಕಿ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಮೇ 2020, 13:13 IST
Last Updated 14 ಮೇ 2020, 13:13 IST
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ರೂಪಾಲಿ ನಾಯ್ಕ ಗುರುವಾರ ಚಾಲನೆ ನೀಡಿದರು
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ರೂಪಾಲಿ ನಾಯ್ಕ ಗುರುವಾರ ಚಾಲನೆ ನೀಡಿದರು   

ಕಾರವಾರ: ಕಳೆದ ವರ್ಷದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೀಡಾದ ಸಾರ್ವಜನಿಕ ಆಸ್ತಿಗಳ ದುರಸ್ತಿ ಕಾಮಗಾರಿಗಳಿಗೆ ಶಾಸಕಿ ರೂಪಾಲಿ ನಾಯ್ಕ ಗುರುವಾರ ಚಾಲನೆ ನೀಡಿದರು.

ಕಳೆದ ವರ್ಷದ ಮಳೆಯಿಂದ ತಾಲ್ಲೂಕಿನ ಅನೇಕ ಗ್ರಾಮಗಳು ಜಲಾವೃತವಾಗಿದ್ದವು. ಜನರು ತಮ್ಮ ದಿನನಿತ್ಯದ ಕಾರ್ಯಗಳಿಗಾಗಿ ಸಂಚರಿಸಲುಬಳಸುತ್ತಿದ್ದ ರಸ್ತೆ ಮತ್ತು ಸೇತುವೆಗಳು ಕೊಚ್ಚಿಹೋಗಿದ್ದವು. ಇವುಗಳ ದುರಸ್ತಿಹಾಗೂ ಪುನರ್ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿವಿಶೇಷ ಅನುದಾನ ನೀಡುವಂತೆ ರೂಪಾಲಿ ನಾಯ್ಕ ಮನವಿ ಮಾಡಿದ್ದರು.

ಈ ಸಲುವಾಗಿ ಮಂಜೂರಾದ ಅನುದಾನದಲ್ಲಿ ₹45 ಲಕ್ಷ ವೆಚ್ಚದಲ್ಲಿಶಿರವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಕಲ ಮಖೇರಿ ರಸ್ತೆ ಅಭಿವೃದ್ಧಿ, ₹20 ಲಕ್ಷ ವೆಚ್ಚದಲ್ಲಿ ಸಾಸನವಾಡ ರಸ್ತೆ ಹಾಗೂ ₹15 ಲಕ್ಷದಲ್ಲಿ ಕಿನ್ನರ ಗ್ರಾಮ ಪಂಚಾಯ್ತಿಯ ಗುಣಸಭಾ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ADVERTISEMENT

ಈ ಸಂದರ್ಭದಲ್ಲಿ ಪ್ರಮುಖರಾದ ವಿಠಲ ನಾಯ್ಕ, ರಾಜೇಶ ನಾಯ್ಕ ಸಿದ್ದರ, ಜಗನ್ನಾಥ ಗಾಂವ್ಕರ, ವಿನಾಯಕ ಗಾಂವ್ಕರ, ಪರೇಶ ನಾಯ್ಕ, ನಂದನ ಮಾಂಜ್ರೇಕರ, ನಿತ್ಯಾನಂದ ಗಾಂವಕರ, ಪುಂಡಲೀಕ ಗಾಂವಕರ, ಮನೋಜ ಭಟ್, ಉದಯ ಬಶೆಟ್ಟಿ, ಗಿರೀಶ ನಾಯ್ಕ, ಹರಿಶ ನಾಗೇಕರ, ಹರಿಶ್ಚಂದ್ರ ಕೊಠಾರಕರ, ಸುಜಾತಾ ಬಾಂದೇಕರ ಹಾಗೂ ಜಿಲ್ಲಾ ಪಂಚಾಯತಸಹಾಯಕ ಕಾರ್ಯ‍ಪಾಲಕ ಎಂಜಿನಿಯರ್ರವಿಕುಮಾರ, ಎಂಜಿನಿಯರ್ ಪ್ರಹ್ಲಾದ ರಾಣೆ ಹಾಗೂ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.