ADVERTISEMENT

ಕಾರವಾರ: ಕುಗ್ರಾಮಗಳ ಮನೆ ಬಾಗಿಲಿಗೇ ಆಸ್ಪತ್ರೆ!

ಸರ್ಕಾರ, ಖಾಸಗಿ ಸಹಭಾಗಿತ್ವದಲ್ಲಿ ಮಂಜೂರಾಗಿರುವ ಯೋಜನೆಯ ಎರಡನೇ ಹಂತ

ಸದಾಶಿವ ಎಂ.ಎಸ್‌.
Published 1 ಸೆಪ್ಟೆಂಬರ್ 2018, 12:31 IST
Last Updated 1 ಸೆಪ್ಟೆಂಬರ್ 2018, 12:31 IST
ಸಂಚಾರಿ ಆರೋಗ್ಯ ಘಟಕದ ಒಳಭಾಗದಲ್ಲಿ ವಿವಿಧ ಉಪಕರಣಗಳನ್ನು ಅಳವಡಿಸಿರುವುದು.
ಸಂಚಾರಿ ಆರೋಗ್ಯ ಘಟಕದ ಒಳಭಾಗದಲ್ಲಿ ವಿವಿಧ ಉಪಕರಣಗಳನ್ನು ಅಳವಡಿಸಿರುವುದು.   

ಕಾರವಾರ:ಜಿಲ್ಲೆಯ ಕುಗ್ರಾಮಗಳಲ್ಲಿ, ವಿಶೇಷವಾಗಿ ಬುಡಕಟ್ಟು ಜನಾಂಗದವರು ಹೆಚ್ಚು ವಾಸವಿರುವ ತಾಲ್ಲೂಕುಗಳ ವಿವಿಧ ಹಳ್ಳಿಗಳಲ್ಲಿ ಇನ್ನುಮುಂದೆ ಚಿಕಿತ್ಸಾಲಯವೇ ಮನೆ ಬಾಗಿಲಿಗೆ ಬರಲಿದೆ. ರಾಜ್ಯದ ಕೆಲವುತಾಲ್ಲೂಕುಗಳಲ್ಲಿಈಗಾಗಲೇ ಇರುವ ಈ ಸೌಲಭ್ಯವನ್ನು ಭಟ್ಕಳ ಮತ್ತು ಯಲ್ಲಾಪುರಕ್ಕೂವಿಸ್ತರಿಸಲಾಗಿದೆ.

ಇದಕ್ಕೆ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಟೆಂಪೊ ಟ್ರಾವೆಲರ್ ವಾಹನಗಳನ್ನು ಬಳಸಲಾಗುತ್ತದೆ. ಆರೋಗ್ಯ ಪರೀಕ್ಷೆಗೆ ಪ್ರಾಥಮಿಕವಾಗಿ ಅಗತ್ಯವಾಗಿರುವ ಎಲ್ಲ ಉಪಕರಣಗಳು, ಸೌಲಭ್ಯಗಳೂ ಅವುಗಳಲ್ಲಿವೆ.

ವಾಹನದಲ್ಲಿಏನೇನಿವೆ?:ಹವಾನಿಯಂತ್ರಿತವಾಗಿರುವ ವಾಹನವುಪ್ರಾಥಮಿಕ ಆರೋಗ್ಯ ಕೇಂದ್ರದ ಮಾದರಿಯಲ್ಲಿದೆ. ರಕ್ತ ಪರೀಕ್ಷೆ ಪ್ರಯೋಗಾಲಯದ ಸಲಕರಣೆಗಳು, ಉಷ್ಣಮಾಪಕ, ತೂಕ ಮಾಪಕ, ಎತ್ತರ ಅಳೆಯುವ ಮಾಪಕ, ಅಗ್ನಿಶಾಮಕ ಉಪಕರಣ, ಆಮ್ಲಜನಕದ ಸಿಲಿಂಡರ್, ಗ್ಲುಕೋಸ್ ಬಾಟಲಿಗಳು, ಹಿಮೋ ಮೀಟರ್, ರಕ್ತದೊತ್ತಡ ಅಳೆಯುವ ಸಾಧನಗಳು ಅದರಲ್ಲಿವೆ. ಜಿಪಿಎಸ್ ಅಳವಡಿಸಿರುವ ಈ ವಾಹನದಲ್ಲಿ ಅಂದಾಜು ₹ 22 ಲಕ್ಷ ಮೌಲ್ಯದ ಸಲಕರಣೆಗಳಿವೆ ಎನ್ನುತ್ತಾರೆ ಘಟಕದ ಸಿಬ್ಬಂದಿ.

ADVERTISEMENT

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಿರುವ ಯೋಜನೆ ಇದಾಗಿದೆ. ಇಂತಹ ಒಟ್ಟು ಎಂಟು ಸಂಚಾರಿ ಘಟಕಗಳನ್ನು ಮಂಜೂರು ಮಾಡಲಾಗಿದೆ. ಅವುಗಳಲ್ಲಿ ಒಂದು ಭಟ್ಕಳ ಮತ್ತು ಯಲ್ಲಾಪುರ ತಾಲ್ಲೂಕುಗಳಲ್ಲಿ ಸಂಚರಿಸಲಿವೆ. ಉಡುಪಿ,ಕುಂದಾಪುರ, ಪುತ್ತೂರು, ಸುಳ್ಯ, ಚಿಕ್ಕಮಗಳೂರು ಮತ್ತು ಶಿಕಾರಿಪುರ ತಾಲ್ಲೂಕುಗಳಿಗೂ ಇಂತಹ ಘಟಕಗಳನ್ನು ನೀಡಲಾಗಿದೆಎಂದು ಯೋಜನೆಯಲ್ಲಿ ಸಹಭಾಗಿತ್ವ ಹೊಂದಿರುವ ಕ್ರಿಯಾ ಹೆಲ್ತ್ ಕೇರ್ ಪ್ರೈವೆಟ್ ಲಿಮಿಟೆಡ್‌ನ ಕರ್ನಾಟಕ ವಿಭಾಗದ ಉಪಾಧ್ಯಕ್ಷೆ ಪ್ರಿಯಾ ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳಿಗೆ ಎರಡನೇ ಹಂತದಲ್ಲಿ ಮಂಜೂರು ಮಾಡಲಾಗಿದೆ.ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಸಂಚಾರಿ ಘಟಕಗಳನ್ನು ಮಂಜೂರು ಮಾಡಲಾಗಿತ್ತು. ಇದೇ ರೀತಿಯ ಯೋಜನೆ ಉತ್ತರಪ್ರದೇಶ, ಪಶ್ಚಿಮ ಬಂಗಾಲ ಹಾಗೂ ಆಂಧ್ರಪ್ರದೇಶದಲ್ಲೂ ಮಂಜೂರಾಗುವಹಂತದಲ್ಲಿದೆ ಎಂದು ಅವರುಮಾಹಿತಿ ನೀಡಿದ್ದಾರೆ.

ಹಾವು ಕಡಿತಕ್ಕೆ ಔಷಧಿ:ಜಿಲ್ಲೆಯಲ್ಲಿ ಅತ್ಯಂತ ಅಗತ್ಯವಾಗಿ ಬೇಕಿರುವ ಹಾವು ಕಡಿತದ ಔಷಧಿ ಈಸಂಚಾರಿ ಘಟಕದಲ್ಲಿದೆ. ಜತೆಗೇ ಶೀತ, ನೆಗಡಿ, ಜ್ವರ, ರಕ್ತದೊತ್ತಡ ಮುಂತಾದ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಔಷಧಿಗಳು, ಚುಚ್ಚುಮದ್ದು, ಸಿರಪ್‌, ಮುಲಾಮುಗಳುಇವೆ ಎನ್ನುತ್ತಾರೆ ಪ್ರಿಯಾ.

ಸಂಪೂರ್ಣ ಉಚಿತ ಚಿಕಿತ್ಸೆ: ಪ್ರತಿ ಘಟಕದಲ್ಲಿ ಒಟ್ಟು ಆರು ಸಿಬ್ಬಂದಿ ಇರುತ್ತಾರೆ. ಅವರಲ್ಲಿ ಒಬ್ಬರುವೈದ್ಯರು, ಒಬ್ಬರು ಸಹಾಯಕ ಸೂಲಗಿತ್ತಿ, ಸ್ಟಾಫ್ ನರ್ಸ್, ಫಾರ್ಮಸಿಸ್ಟ್, ಪ್ರಯೋಗಾಲಯ ಸಹಾಯಕರು ಮತ್ತು ವಾಹನ ಚಾಲಕರು ಅವರಲ್ಲಿ ಒಳಗೊಂಡಿರುತ್ತಾರೆ.

ಘಟಕದ ಕಾರ್ಯ ನಿರ್ವಹಣೆ ವ್ಯಾಪ್ತಿಯ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಮನೆಗಳಿಗೆ ತೆರಳುವ ಸಿಬ್ಬಂದಿ ಆರೋಗ್ಯ ಸಮೀಕ್ಷೆ ನಡೆಸುತ್ತಾರೆ. ನಂತರ ಅಲ್ಲಿಗೆ ವೇಳಾಪಟ್ಟಿಗುರುತು ಮಾಡಿಕೊಂಡು ತೆರಳಿ ಲಭ್ಯ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.