ADVERTISEMENT

ಕುಮಟಾ| ಮೋದಿಯಿಂದಲೇ ರಾಮ ಮಂದಿರ ಉದ್ಘಾಟನೆ: ಸಚಿವ ಕೋಟ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 15:46 IST
Last Updated 19 ಮಾರ್ಚ್ 2023, 15:46 IST
ಕುಮಟಾದಲ್ಲಿ ಭಾನುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಕುಮಟಾದಲ್ಲಿ ಭಾನುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಕುಮಟಾ: ‘ನರೇಂದ್ರ ಮೋದಿ ಪ್ರಧಾನಿ ಆಗಿರುವಾಗಲೇ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಬಿ.ಜೆ.ಪಿ ವಿಜಯ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ‘ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಭರವಸೆಯ ದೂರದೃಷ್ಟಿ ನಮ್ಮ ಮುಖಂಡರಿಗೆ ಖಂಡಿತಾ ಇತ್ತು. ಅದರ ಪರಿಣಾಮವಾಗಿ ಇಂದು ಬಿಜೆಪಿ ದೇಶದ ಆಡಳಿತ ಚುಕ್ಕಾಣಿ ಹಿಡಿದಿದೆ’ ಎಂದು ತಿಳಿಸಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಕುಮಟಾದಲ್ಲಿ ನೀರಿನ ಬರ ಎದುರಿಸುತ್ತಿದ್ದ 15 ಗ್ರಾಮ ಪಂಚಾಯ್ತಿಗಳಿಗೆ ಕುಡಿಯುವ ನೀರು ಕೊಡುತ್ತಿರುವುದು ಬಿ.ಜೆ.ಪಿ ಭರವಸೆಯ ಸಂಕೇತ’ ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ತಾಲ್ಲೂಕು ಘಟಕದ ಅಧ್ಯಕ್ಷ ಹೇಮಂತ ಗಾಂವ್ಕರ್, ಪಕ್ಷದ ರಾಜ್ಯ ಸಮಿತಿ ಸದಸ್ಯ ವಿವೇಕಾನಂದ ಡಬ್ಬಿ, ಮುಖಂಡರಾದ ಕೆ.ಜಿ. ನಾಯ್ಕ, ಎನ್.ಎಸ್. ಹೆಗಡೆ, ರಾಜೇಂದ್ರ ನಾಯ್ಕ, ಶಿವಾನಿ ಶಾಂತಾರಾಮ, ಕುಮಾರ ಮಾರ್ಕಂಡೆ, ಎಂ.ಜಿ. ಭಟ್ಟ, ಡಾ.ಜಿ.ಜಿ. ಹೆಗಡೆ, ಜಗನ್ನಾಥ ನಾಯ್ಕ, ಜಿ.ಐ.ಹೆಗಡೆ, ಮಧುಸೂದನ ಹೆಗಡೆ, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ,ವೆಂಕಟ್ರಮಣ ಹೆಗಡೆ, ಸುಬ್ರಾಯ ವಾಳ್ಕೆ, ಅಖಿಲ್ ಖಾಜಿ ಇದ್ದರು. ವಿವಿಧ ತಂಡಗಳು ಪ್ರದರ್ಶಿಸಿದ ಸುಗ್ಗಿ ಕುಣಿತ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.