ADVERTISEMENT

ಮಂಗಗಳ ಸಾವು, ಮುಂಜಾಗ್ರತೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 13:51 IST
Last Updated 27 ಜನವರಿ 2020, 13:51 IST

ಸಿದ್ದಾಪುರ(ಉತ್ತರ ಕನ್ನಡ): ತಾಲ್ಲೂಕಿನ ಇಟಗಿ ಸಮೀಪದ ಹೊನ್ನೆಮಡಿಕೆ ಮತ್ತು ಬೈಲಳ್ಳಿಯಲ್ಲಿ ಸತ್ತಿರುವ ಎರಡು ಮಂಗಗಳ ಕಳೇಬರ ಸೋಮವಾರ ಪತ್ತೆಯಾಗಿದೆ.

ಇದುವರೆಗೆ ತಾಲ್ಲೂಕಿನಲ್ಲಿ 21 ಮಂಗಗಳು ಸತ್ತಿದ್ದು, ಮನುಷ್ಯರಿಗೆ ಮಂಗನ ಕಾಯಿಲೆ ಬಂದಿರುವ ಬಗ್ಗೆ ವರದಿಯಾಗಿಲ್ಲ. ಇಟಗಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳಲಾಗುವುದು. ಜನರು ಕಾಡಿಗೆ ಸೊಪ್ಪು, ದರಕು ತರುವುದಕ್ಕೆ ತೆರಳಬಾರದು. ಕಾಡಿಗೆ ಅಥವಾ ತೋಟಕ್ಕೆ ತೆರಳಬೇಕಾದರೆ ಡಿಎಂಪಿ ತೈಲ ಲೇಪಿಸಿಕೊಳ್ಳಬೇಕು. ಒಂದೊಮ್ಮೆ ಜ್ವರದ ಪ್ರಕರಣ ಕಂಡುಬಂದರೆ ತಕ್ಷಣ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT