ADVERTISEMENT

ಹೊನ್ನಾವರ: ಮಂಗನ ಕಾಯಿಲೆಯಿಂದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 24 ಮೇ 2025, 16:24 IST
Last Updated 24 ಮೇ 2025, 16:24 IST
<div class="paragraphs"><p>‘ಮಂಗನ ಕಾಯಿಲೆ’ </p></div>

‘ಮಂಗನ ಕಾಯಿಲೆ’

   

ಹೊನ್ನಾವರ: ತಾಲ್ಲೂಕಿನ ಹಳದೀಪುರ ಮೀನು ಮಾರುಕಟ್ಟೆ ನಿವಾಸಿ ನಾಣಿ ಹಮ್ಮಣ್ಣ ಗೌಡ(74) ಮಂಗನಕಾಯಿಲೆಯಿಂದ (ಕೆ.ಎಫ್.ಡಿ.) ಶುಕ್ರವಾರ ಮೃತಪಟ್ಟಿದ್ದಾರೆ.

ನಾಣಿ ಗೌಡ ಅವರ ಸಾವಿನಿಂದ ಪ್ರಸ್ತುತ ಬೇಸಿಗೆ ಕಾಲದಲ್ಲಿ ಮಂಗನಕಾಯಿಲೆಗೆ ತುತ್ತಾಗಿ ಸತ್ತವರ ಸಂಖ್ಯೆ ಎರಡಕ್ಕೇರಿದೆ. ಎರಡು ದಿನಗಳ ಹಿಂದೆ ಅವರಿಗೆ ಮಂಗನಕಾಯಿಲೆ ರೋಗ ತಗಲಿರುವುದು ದೃಢಪಟ್ಟಿತ್ತು. ಕಿಡ್ನಿ, ಲಿವರ್‌ಗೆ ಸಂಬಂಧಪಟ್ಟ ಕಾಯಿಲೆಗಳೂ ಅವರಿಗಿತ್ತು.

ADVERTISEMENT

‘ತಾಲ್ಲೂಕಿನಲ್ಲಿ ಇನ್ನಾವುದೇ ಮಂಗನಕಾಯಿಲೆ ರೋಗಿಗಳು ಪತ್ತೆಯಾಗಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಸಹಜವಾಗಿ ಮಂಗನಕಾಯಿಲೆ ತೀವ್ರತೆ ಕಡಿಮೆಯಾಗಲಿದ್ದು ಆತಂಕ ಪಡುವ ಅಗತ್ಯವಿಲ್ಲ’ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.