ADVERTISEMENT

ಯಲ್ಲಾಪುರ: ರಸ್ತೆ ಉದ್ಘಾಟನೆಯ ಶಿಲಾ ಫಲಕದಲ್ಲಿ ಸಂಸದ ಕಾಗೇರಿ ಹೆಸರು ನಾಪತ್ತೆ!

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:08 IST
Last Updated 19 ಜೂನ್ 2025, 14:08 IST
<div class="paragraphs"><p>ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ</p></div>

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

   

ಯಲ್ಲಾಪುರ: ‘ತಾಲ್ಲೂಕಿನ ಬೇಣದಗುಳೆಯಲ್ಲಿ ಈಚೆಗೆ ನಡೆದ ಪದ್ಮಾಪುರ– ಹೆಗ್ಗಾರ ರಸ್ತೆ ಉದ್ಘಾಟನೆಯ ಶಿಲಾ ನಾಮಫಲಕದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಹೆಸರನ್ನು ಕೈಬಿಟ್ಟು ಅಗೌರವ ತೋರಿಸಲಾಗಿದೆ’ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ, ದಿಶಾ ಕಮಿಟಿ ಸದಸ್ಯರಾದ ಉಮೇಶ ಭಾಗ್ವತ ಮತ್ತು ಸುನಂದಾ ಮರಾಠಿ, ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆರೋಪಿಸಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಉದ್ಘಾಟಕರು ಎಂದು ನಮೂದಿಸಲಾಗಿತ್ತು. ಶಿಲಾ ನಾಮಫಲಕದಲ್ಲಿ ಅವರ ಹೆಸರನ್ನು ಬಿಡಲಾದೆ. ಈ ಕುರಿತು ಸ್ಪಷ್ಟನೆ ಕೋರಿ ಕೈಗಾ ಅಧಿಕಾರಿಗಳಿಗೂ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.