ADVERTISEMENT

ಶಿರಸಿ: 100 ಮೀಟರ್ ಉದ್ದದ ನಾಗರ ಹಾವಿನ ಚಿತ್ರ ಬಿಡಿಸಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 20:23 IST
Last Updated 25 ಜುಲೈ 2020, 20:23 IST
   

ಶಿರಸಿ: ನಾಗರ ಪಂಚಮಿ ಹಬ್ಬದಂದು ಸುಮಾರು 100 ಮೀಟರ್ ಉದ್ದದ ನಾಗರ ಹಾವಿನ ಚಿತ್ರ ಬಿಡಿಸಿ ಎಲ್ಲ ಗಮನ ಸೆಳೆದಿದ್ದಾರೆ ಮೂವರು ಮಕ್ಕಳು.

ತಾಲ್ಲೂಕಿನ ಕಲ್ಗುಂಡಿಕೊಪ್ಪದಲ್ಲಿ ಎಂಟು ಮನೆಗಳು ಹೊಂದಿಕೊಂಡಿರುವ ಕೇರಿಯಿದೆ. ಈ ಕೇರಿ ಮನೆಯ ಕಟ್ಟೆಯನ್ನೇ ಕ್ಯಾನ್ವಾಸ್ ಮಾಡಿಕೊಂಡ ಭೂಮಿಕಾ, ಪ್ರಣವ್ ಮತ್ತು ಆದರ್ಶ, ಚಾಕ್ ಪೀಸ್ ಬಳಸಿ, ತೆವಳುತ್ತ ಸಾಗುವ ನಾಗರ ಹಾವವನ್ನು ಸೃಷ್ಟಿಸಿದ್ದಾರೆ.

ಮಕ್ಕಳ ಸೃಜನಶೀಲತೆಗೆ ಊರವರು ಬೆರಗುಗೊಂಡಿದ್ದಾರೆ. ಈ ಬೃಹತ್ ಹಾವಿನ ಚಿತ್ರದ ವಿಡಿಯೊ ತುಣುಕು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ. ಕಾಲೇಜು ವಿದ್ಯಾರ್ಥಿನಿ ಭೂಮಿಕಾ, ಪ್ರೌಢಶಾಲೆ ವಿದ್ಯಾರ್ಥಿ ಪ್ರಣವ್, ಪ್ರಾಥಮಿಕ ಶಾಲೆ ವಿದ್ಯಾರ್ಥಿ ಆದರ್ಶ ಅವರ ನಾಗ ಭಕ್ತಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.