ಹೊನ್ನಾವರ: ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ವಿವಿಧ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಕಾಳುಮೆಣಸು, ಬಾಳೆ, ಅನಾನಸ್, ಮಾವು, ಡ್ರ್ಯಾಗನ್, ರಾಂಬೂತನ್, ಹಲಸು, ಹೈಬ್ರಿಡ್ ತರಕಾರಿ, ಹೂವು ಮತ್ತು ಗೇರು ಬೆಳೆಗಳ ಪ್ರದೇಶ ವಿಸ್ತರಣೆ, ಅಣಬೆ ಉತ್ಪಾದನೆ, ಪ್ಯಾಕ್ ಹೌಸ್, ಹನಿ ನೀರಾವರಿ ಮತ್ತು ನೀರು ಸಂಗ್ರಹಣಾ ಘಟಕಗಳ ನಿರ್ಮಾಣ, ಟ್ರ್ಯಾಕ್ಟರ್, ಅಲ್ಯೂಮಿನಿಯಂ ಏಣಿ, ಫೈಬರ್ ದೋಟಿ, ಕಳೆ ಮತ್ತು ಹುಲ್ಲು ಕತ್ತರಿಸುವ, ಅಡಿಕೆ ಸುಲಿಯುವ, ಕಾಳು ಮೆಣಸು ಬಿಡಿಸುವ, ಮರ ಕತ್ತರಿಸುವ ಮತ್ತು ಸಿಂಪಡಣೆ ಮಾಡುವ ಯಂತ್ರಗಳ ಖರೀದಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದ್ದು ಇಲ್ಲಿನ ತೋಟಗಾರಿಕಾ ಇಲಾಖೆಯ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸೂರ್ಯಕಾಂತ ಕೆ.ವಿ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.