ADVERTISEMENT

ಹಳಿಯಾಳ:ರಾಷ್ಟ್ರ ನಾಯಕರ ಪ್ರತಿಮೆ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 7:26 IST
Last Updated 14 ಆಗಸ್ಟ್ 2025, 7:26 IST
ಹಳಿಯಾಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಟ್ಟಣದಲ್ಲಿ ಪ್ರತಿಷ್ಟಾಪಿಸಲಾದ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆ ಹಾಗೂ ಆವರಣದ ಸುತ್ತಲೂ ಸ್ವಚ್ಛತಾ ಕಾರ್ಯ ನಡೆಸಲಾಯಿತು
ಹಳಿಯಾಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಟ್ಟಣದಲ್ಲಿ ಪ್ರತಿಷ್ಟಾಪಿಸಲಾದ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆ ಹಾಗೂ ಆವರಣದ ಸುತ್ತಲೂ ಸ್ವಚ್ಛತಾ ಕಾರ್ಯ ನಡೆಸಲಾಯಿತು   

ಹಳಿಯಾಳ: ಪಟ್ಟಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬುಧವಾರ ಬಿಜೆಪಿಯಿಂದ ಮಹಾನ ರಾಷ್ಟ್ರ ನಾಯಕರ ಪ್ರತಿಮೆ ಹಾಗೂ ಪ್ರತಿಮೆ ಪ್ರತಿಷ್ಠಾಪಿಸಿದ ಆವರಣದ ಸುತ್ತಲೂ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಪಟ್ಟಣದ ಶಿವಾಜಿ ಸರ್ಕಲ್‌ ನಲ್ಲಿ ಪ್ರತಿಷ್ಠಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ, ಬಸವೇಶ್ವರ ಸರ್ಕಲ್‌ ನಲ್ಲಿರುವ ಬಸವೇಶ್ವರ ಮಹಾರಾಜ, ವೀರ ರಾಣಿ ಚನ್ನಮ್ಮ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ.ಬಾಬಾ ಸಾಹೇಬ ಅಂಬೇಡ್ಕರ, ಸುಭಾಷ್ ಚಂದ್ರ ಬೋಸ್ ರವರ ಪುತ್ಥಳಿಗಳನ್ನು ಸ್ವಚ್ಛಗೊಳಿಸಿದರು.

ಭಾಜಪ ಮಂಡಲ ಪ್ರಧಾನ ಕಾರ್ಯದರ್ಶಿ, ಸಂತೋಷ ಘಟಕಾಂಬಳೆ, ಪದಾದಿಕಾರಿಗಳಾದ ತಾನಾಜಿ ಪಟ್ಟೆಕರ, ಸಂಗೀತಾ ಜಾವಳೇಕರ, ಜಯಲಕ್ಷ್ಮಿ ಚೌಹಾಣ, ರತ್ನಮಾಲಾ ಮೂಳೆ, ಶಕುಂತಲಾ ಜಾಧವ, ಮಾಲಾ ಹುಂಡೇಕರ, ಉದಯ ಜಾಧವ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ರಂಜಿತಾ ನಡಹಟ್ಟಿ, ಮಹಾದೇವಿ ಬಡ್ರಣ್ಣವರ, ಪರಶುರಾಮ ಶಾಪೂರಕರ, ದೀಪಕ ಗೌಳಿ ಇದ್ದರು.

ADVERTISEMENT
ಹಳಿಯಾಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಟ್ಟಣದ ಬಸವೇಶ್ವರ ಸರ್ಕಲ್‌ ಬಳಿ ಪ್ರತಿಷ್ಠಾಪಿಸಲಾದ ಬಸವೇಶ್ವರ ಪ್ರತಿಮೆ ಹಾಗೂ ಆವರಣದ ಸುತ್ತಲೂ ಸ್ವಚ್ಛತಾ ಕಾರ್ಯ ನಡೆಸಲಾಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.