ADVERTISEMENT

ನೀನಾಸಂ ತಿರುಗಾಟ ನಾಟಕೋತ್ಸವ 17ರಿಂದ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:56 IST
Last Updated 7 ನವೆಂಬರ್ 2025, 7:56 IST
<div class="paragraphs"><p>ನೀನಾಸಂ </p></div>

ನೀನಾಸಂ

   

ಹೊನ್ನಾವರ: ಮಾತೃಛಾಯಾ ಟ್ರಸ್ಟ್ ಕಾಸರಕೋಡ ಇದರ ಸಂಘಟನೆಯಲ್ಲಿ ನೀಲಕಂಠೇಶ್ವರ ನಾಟ್ಯ ಸಂಘ ಹೆಗ್ಗೋಡು ತಂಡದಿಂದ 'ನೀನಾಸಂ ತಿರುಗಾಟ-ನಾಟಕೋತ್ಸವ' ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ನ.17 ಹಾಗೂ 18ರಂದು ಪ್ರತಿದಿನ ರಾತ್ರಿ 8.30ಕ್ಕೆ ನಡೆಯಲಿದೆ.

17 ರಂದು ಎಂ.ಗಣೇಶ ಅವರ ನಿರ್ದೇಶನದಲ್ಲಿ ಬಾನು ಮುಷ್ತಾಕ್ ರಚನೆಯ 'ಹೃದಯದ ತೀರ್ಪು' ಹಾಗೂ 18ರಂದು ಶಂಕರ ವೆಂಕಟೇಶ್ವರನ್ ಅವರ ನಿರ್ದೇಶನದಲ್ಲಿ ನಾ ದಾಮೋದರ ಶೆಟ್ಟಿ ಭಾಷಾಂತರಿಸಿರುವ ಜಿ.ಶಂಕರ ಪಿಳ್ಳೆ ರಚನೆಯ 'ಆವತರಣಮ್ ಭ್ರಾಂತಾಲಯಮ್' ನಾಟಕಗಳು ಪ್ರದರ್ಶನಗೊಳ್ಳುವವು.ರಂಗ ನಿದರ್ೇಶಕ ಕಿರಣ ಭಟ್ಟ ಹಾಗೂ ಜನರಿಂದ ಸಂಗ್ರಹಿಸಿದ ಹಣವನ್ನು ಕಷ್ಟದಲ್ಲಿದ್ದ ಬಾಲಕನೋರ್ವನಿಗೆ ನೀಡಿದ ಮಂಗಲಮುಖಿ ಆಯಿಶಾ ಹಾಗೂ ಅವರ ತಂಡವನ್ನು ಮಾತೃಛಾಯಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಗುವುದು.ನಾಟಕ ಪ್ರದರ್ಶನ ಉಚಿತವಾಗಿದ್ದು ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಸಂಘಟಿಸಿರುವ ಪ್ರಸ್ತುತ ಕಾರ್ಯಕ್ರಮಕ್ಕೆ ಕಲಾಪ್ರೇಮಿಗಳು ಆಗಮಿಸಬೇಕು' ಎಂದು ಟ್ರಸ್ಟ್ ಅಧ್ಯಕ್ಷ ಅಶೋಕ ಕಾಸರಕೋಡ ಪ್ರಕಟಣೆಯಲ್ಲಿ ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.