ADVERTISEMENT

ಕಾರವಾರ: ಕೆರವಡಿ ಕೆರೆಯಲ್ಲಿ ಸೂಜಿ ಬಾಲದ ಬಾತುಗಳ ಕಲರವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 16:08 IST
Last Updated 10 ಫೆಬ್ರುವರಿ 2022, 16:08 IST
ಕಾರವಾರ ತಾಲ್ಲೂಕಿನ ಕೆರವಡಿ ಕೆರೆಯ ಮೇಲೆ ‘ಸೂಜಿ ಬಾಲದ ಬಾತು’ ಹಾರಾಡುತ್ತಿರುವುದು. ಚಿತ್ರ: ಕೆ.ಪುಟ್ಟರಾಜು
ಕಾರವಾರ ತಾಲ್ಲೂಕಿನ ಕೆರವಡಿ ಕೆರೆಯ ಮೇಲೆ ‘ಸೂಜಿ ಬಾಲದ ಬಾತು’ ಹಾರಾಡುತ್ತಿರುವುದು. ಚಿತ್ರ: ಕೆ.ಪುಟ್ಟರಾಜು   

ಕಾರವಾರ: ತಾಲ್ಲೂಕಿನ ಕೆರವಡಿ ಗ್ರಾಮದ ಕೆರೆಗೆ ಸಾವಿರಾರು ‘ಸೂಜಿ ಬಾಲದ ಬಾತು’ಗಳು (ನಾರ್ದರ್ನ್ ಪಿನ್‌ಟೈಲ್) ವಲಸೆ ಬಂದಿವೆ. ಇದು ಹಕ್ಕಿ ವೀಕ್ಷಕರ ಸಂತಸಕ್ಕೆ ಕಾರಣವಾಗಿದೆ.

ಸೂಜಿ ಬಾಲದ ಬಾತು

ಉತ್ತರ ಅಮೆರಿಕ, ಉತ್ತರ ಯೂರೋಪ್ ಮತ್ತು ಏಷ್ಯಾ ಖಂಡದ ವಿವಿಧ ಕಡೆಗಳಲ್ಲಿ ಈ ಬಾತುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಆಫ್ರಿಕಾದ ಪಶ್ಚಿಮ ಭಾಗ, ಆಗ್ನೇಯ ಏಷ್ಯಾ, ಕೊಲ್ಲಿ ರಾಷ್ಟ್ರಗಳ ದಕ್ಷಿಣದಲ್ಲಿ ಹಾಗೂ ಪಾಕಿಸ್ತಾನದ ಕೆಲವೆಡೆಯೂ ಈ ಹಕ್ಕಿಗಳಿವೆ ಎಂದು ಕೈಗಾದ ಪಕ್ಷಿ ವೀಕ್ಷಕ ಕೆ.ಪುಟ್ಟರಾಜು ಮಾಹಿತಿ ನೀಡಿದ್ದಾರೆ.

‘ಚಳಿಗಾಲದಲ್ಲಿ ನಮ್ಮ ದೇಶಕ್ಕೆ ಇವು ಸಾಮಾನ್ಯವಾಗಿ ವಲಸೆ ಬರುತ್ತವೆ. ಹೆಚ್ಚು ಜೌಗು ಪ್ರದೇಶದಲ್ಲಿ, ಪೊದೆಗಳು ಇರುವ ಸ್ಥಳಗಳನ್ನು ಹುಡುಕಿಕೊಂಡು ಬಂದು ಒಂದಷ್ಟು ದಿನ ಇದ್ದು ವಾಪಸ್ ಹೋಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿಯ ಮೇಲೆ ಮನುಷ್ಯನ ಅನಿಯಂತ್ರಿತ ಚಟುವಟಿಕೆಗಳಿಂದಾಗಿ ಈ ರೀತಿಯ ಬಾತುಗಳು ವಿನಾಶದತ್ತ ಸಾಗುತ್ತಿವೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಬಾತುಗಳು ಸಾಮಾನ್ಯವಾಗಿ ಹುಲ್ಲಿನ ಮಧ್ಯೆ ಇರುವ ಕ್ರಿಮಿ ಕೀಟಗಳು, ಜಲಮೂಲಗಳಲ್ಲಿರುವ ಜೀವಿಗಳನ್ನು ಸೇವಿಸುತ್ತವೆ. ಮೊಟ್ಟೆಯೊಡೆದು ಹೊರ ಬರುವ ಮರಿಗಳು, ಕೆಲವೇ ಗಂಟೆಗಳಲ್ಲಿ ತಮ್ಮ ತಾಯಿಯನ್ನು ಅನುಸರಿಸಿಕೊಂಡು ಹೋಗುವ ಸಾಮರ್ಥ್ಯ ಪಡೆದುಕೊಳ್ಳುತ್ತವೆ. ಪ್ರತಿವರ್ಷ ಸಾವಿರಾರು ಕಿಲೋಮೀಟರ್ ಹಾರಾಡುತ್ತ ವಲಸೆ ಹೋಗುತ್ತವೆ’ ಎಂದು ವಿವರಿಸಿದರು.

ಕಾರವಾರ ತಾಲ್ಲೂಕಿನ ಕೆರವಡಿಯ ಆಕಾಶದಲ್ಲಿ ನೂರಾರು ‘ಸೂಜಿ ಬಾಲದ ಬಾತು’ಗಳು ವಿಹರಿಸುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.