ಕಾರವಾರ: ತಾಲ್ಲೂಕಿನ ದೇವಬಾಗ ಕಡಲತೀರದಲ್ಲಿ ಬುಧವಾರ ಸಂಜೆ 89 ಆಲಿವ್ ರಿಡ್ಲೆ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಡಲಾಮೆ ಮರಿಗಳನ್ನು ಒಂದೊಂದಾಗಿ ಸಮುದ್ರಕ್ಕೆ ಬಿಟ್ಟರು. ಗೂಡಿನಲ್ಲಿ ಸಂರಕ್ಷಿಸಿದ್ದ 127 ಮೊಟ್ಟೆಗಳ ಪೈಕಿ 89 ಮರಿಗಳು ಹೊರಗೆ ಬಂದಿದ್ದವು.
‘ಕಾರವಾರ ಉಪವಿಭಾಗ ವ್ಯಾಪ್ತಿಯಲ್ಲಿ ಈ ಬಾರಿ 110 ಕಡಲಾಮೆಯ ಮೊಟ್ಟೆಗೂಡುಗಳನ್ನು ಸಂರಕ್ಷಿಸಲಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಆಲಿವ್ ರಿಡ್ಲೆ ಮೊಟ್ಟೆ ಇಡುವ ಪ್ರಮಾಣ ಈ ಭಾಗದಲ್ಲಿ ಹೆಚ್ಚಿದೆ’ ಎಂದು ಡಿಸಿಎಫ್ ಸಿ.ರವಿಶಂಕರ ಹೇಳಿದರು.
ಎಸಿಎಫ್ ಕೆ.ಡಿ.ನಾಯ್ಕ, ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗದ ಆರ್‌ಎಫ್ಒ ಕಿರಣ ಮನವಚಾರಿ, ಕಾರವಾರ ಆರ್‌ಎಫ್ಒ ಗಜಾನನ ನಾಯ್ಕ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.