
ಕುಮಟಾ: ಸಮುದ್ರತೀರದಲ್ಲಿ ‘ಆಲಿವ್ ರಿಡ್ಲೆ’ ಜಾತಿಯ ಕಡಲಾಮೆಯ 94 ಮೊಟ್ಟೆಗಳ ಗೂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಿದ್ದು, ತಾಲ್ಲೂಕಿನ ಧಾರೇಶ್ವರದ ರಾಮನಗಿಂಡಿ ಬಳಿ ಆಮೆಮರಿ ಕೇಂದ್ರದಲ್ಲಿ ಇರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಕುಮಟಾ ಆರ್‌ಎಫ್ಒ ಪ್ರವೀಣ ನಾಯಕ, ‘ಈಗ ಕಡಲಾಮೆಗಳು ಮೊಟ್ಟೆಯಿಡಲು ಸಮುದ್ರ ತೀರಕ್ಕೆ ಬರುವ ಸಮಯ. ಶುಕ್ರವಾರ ರಾತ್ರಿ 11ಕ್ಕೆ ಬಂದ ಕಡಲಾಮೆ ಗೂಡು ಕೊರೆದು 94 ಮೊಟ್ಟೆಗಳಿಟ್ಟಿದೆ. ಅವುಗಳನ್ನು ಸುರಕ್ಷಿತವಾಗಿ ಮುಚ್ಚಿ ವಾಪಸು ಹೊರಟು ಹೋಗಲು ಬೆಳಗಿನ ಜಾವ ಐದು ಗಂಟೆ ಆಗಿರಬಹುದು’ ಎಂದರು.
‘ಇನ್ನು 45 ದಿನಗಳಲ್ಲಿ ಈ ಮೊಟ್ಟೆಗಳಿಂದ ಮರಿಗಳು ಹೊರ ಬರಲಿವೆ. ಇದು ಈ ವರ್ಷದ ಆಮೆ ಮೊಟ್ಟೆಯ ಮೊದಲ ಗೂಡಾಗಿದೆ. ಸ್ಥಳೀಯ ಮಾಹಿತಿದಾರರು ಇಲಾಖೆಗೆ ಸಹಕರಿಸಿದ್ದಕ್ಕೆ ಅವರಿಗೆ ಸೂಕ್ತ ಪ್ರೋತ್ಸಾಹಧನ ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.