ADVERTISEMENT

ಕಾರವಾರ:: ಎಸ್ಸೆಸ್ಸೆಲ್ಸಿ- 170 ಶಾಲೆಗಳಿಗೆ ‘ಎ’ ಗ್ರೇಡ್ ಫಲಿತಾಂಶ

ಪರೀಕ್ಷೆ ಬರೆದಿದ್ದ 10,227 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 15:46 IST
Last Updated 9 ಆಗಸ್ಟ್ 2021, 15:46 IST

ಕಾರವಾರ: ಸೋಮವಾರ ಪ್ರಕಟವಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯ ‌187 ಪ್ರೌಢಶಾಲೆಗಳ ಪೈಕಿ 170 ಶಾಲೆಗಳು ‘ಎ’ ದರ್ಜೆ ಪಡೆದುಕೊಂಡಿವೆ.

ಒಟ್ಟು 10,227 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದರು. ಕೋವಿಡ್ ಲಾಕ್‌ಡೌನ್ ಕಾರಣದಿಂದ ಭೌತಿಕ ತರಗತಿಗಳು ನಡೆದಿರಲಿಲ್ಲ. ಪರೀಕ್ಷೆಯೂ ಅನಿಶ್ಚಿತವಾಗಿತ್ತು. ಬದಲಾದ ಪರೀಕ್ಷಾ ಪದ್ಧತಿಯಲ್ಲಿ ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಪರಿಚಯಿಸಲಾಗಿತ್ತು. ಅಲ್ಲದೇ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣರಾಗುತ್ತಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು. ಅದರ ಪ್ರಕಾರ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳೂ ಪಿ.ಯು.ಗೆ ಬಡ್ತಿ ಪಡೆದಿದ್ದಾರೆ.

‘ಶೈಕ್ಷಣಿಕ ಜಿಲ್ಲೆಯ 16 ಪ್ರೌಢಶಾಲೆಗಳಿಗೆ ‘ಬಿ’ ದರ್ಜೆ ಹಾಗೂ ಒಂದು ಶಾಲೆಗೆ ‘ಸಿ’ ದರ್ಜೆಯ ಫಲಿತಾಂಶ ಬಂದಿದೆ. ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ಕೃಷ್ಣ ನಾಯ್ಕ 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾಳೆ’ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.