ಹಳಿಯಾಳ: ಮಕ್ಕಳ ಭವಿಷ್ಯದ ದಿಕ್ಕನ್ನು ಬದಲಾಯಿಸಲು ಶಿಕ್ಷಣ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದು ವಿಮಲ್ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಪ್ರಾಚಾರ್ಯ ಬಸವರಾಜು ಎಚ್.ಎಂ. ಹೇಳಿದರು.
ಇತ್ತೀಚಿಗೆ ಇಲ್ಲಿನ ವಿವಿಡಿ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ ಪ್ಲೇ ಹೋಂ ಮಕ್ಕಳಿಗಾಗಿ ‘ವಿದ್ಯಾರಂಭ’ ಮಗುವಿನ ಕಲಿಕೆಯತ್ತ ಮೊದಲ ಹೆಜ್ಜೆ ಎಂಬ ಅಕ್ಷರಾರಂಭ ಹಾಗೂ ಸವಿತಾ ಹೋಮದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಮಗುವಿನ ಮನಸ್ಸು ಮೇಣದಂತೆ ಅದಕ್ಕೆ ಸುಂದರ ರೂಪ ಕೊಡುವುದು ನಮ್ಮೆಲ್ಲರ ಕರ್ತವ್ಯ. ಪಾಲಕರು ತಮ್ಮ ಮಕ್ಕಳಿಗೆ ಅಕ್ಷರ ಅಭ್ಯಾಸವನ್ನು ಪ್ರತಿ ದಿನ ಮಾಡುವುದನ್ನು ನೆನಪಿಸಿಕೊಳ್ಳಿ ಎಂದರು.
ಅಕ್ಷರ ಅಭ್ಯಾಸದಿಂದ ಮಕ್ಕಳ ಪ್ರಥಮ ಹೆಜ್ಜೆ ಇರಿಸಲು ಅಕ್ಷರದ ಜ್ಞಾನ ಬಹಳ ಮುಖ್ಯವಾದುದು ಎಂದು ಮಕ್ಕಳ ಪಾಲಕರು ಹೇಳಿದರು.
ದಾಂಡೇಲಿಯ ಬಲಮುರಿ ಗಣಪತಿ ದೇವಸ್ಥಾನದ ಅರ್ಚಕ ವಿಘ್ನೇಶ್ವರ ಭಟ್‌ರವರು ಸವಿತಾ ಹೋಮ ಹಾಗೂ ಸರಸ್ವತಿ ಪೂಜೆ ಸಲ್ಲಿಸಿ ಮಕ್ಕಳ ಕಲಿಕೆಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳ ಪಾಲಕರು ಭಾಗಿಯಾಗಿ, ವಿದ್ಯಾರಂಭದ ವಿಧಿ ವಿಧಾನದಂತೆ ತಮ್ಮ ಮಕ್ಕಳಿಗೆ ಅಕ್ಕಿಯಲ್ಲಿ ಮಕ್ಕಳಿಂದ ಮೊದಲ ಅಕ್ಷರವನ್ನು ಬರೆಸುವ ಮೂಲಕ ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.