ADVERTISEMENT

ಶಿರಸಿ: ಡಿ.ಎಸ್.ಶ್ರೀಧರಗೆ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 20:20 IST
Last Updated 20 ಫೆಬ್ರುವರಿ 2022, 20:20 IST
ಯಕ್ಷಗಾನ ಅಕಾಡೆಮಿ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು ಯಕ್ಷಗಾನ ಅರ್ಥಧಾರಿ ಶಿವಮೊಗ್ಗದ ಡಿ.ಎಸ್.ಶ್ರೀಧರ ಅವರಿಗೆ ಹಾಗೂ ಮೂವರಿಗೆ ಗೌರವ ಪ್ರಶಸ್ತಿ, ಹತ್ತು ಮಂದಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗಳನ್ನು ಶಿರಸಿಯ ಟಿ.ಆರ್.ಸಿ. ಸಭಾಂಗಣದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು
ಯಕ್ಷಗಾನ ಅಕಾಡೆಮಿ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು ಯಕ್ಷಗಾನ ಅರ್ಥಧಾರಿ ಶಿವಮೊಗ್ಗದ ಡಿ.ಎಸ್.ಶ್ರೀಧರ ಅವರಿಗೆ ಹಾಗೂ ಮೂವರಿಗೆ ಗೌರವ ಪ್ರಶಸ್ತಿ, ಹತ್ತು ಮಂದಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗಳನ್ನು ಶಿರಸಿಯ ಟಿ.ಆರ್.ಸಿ. ಸಭಾಂಗಣದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು   

ಶಿರಸಿ: ಯಕ್ಷಗಾನ ಅಕಾಡೆಮಿ ವತಿಯಿಂದ 2020ನೇ ಸಾಲಿಗೆ ನೀಡಲಾಗುವ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು ಯಕ್ಷಗಾನ ಅರ್ಥಧಾರಿ ಶಿವಮೊಗ್ಗದ ಡಿ.ಎಸ್.ಶ್ರೀಧರ ಅವರಿಗೆ ಹಾಗೂ ಮೂವರಿಗೆ ಗೌರವ ಪ್ರಶಸ್ತಿ, ಹತ್ತು ಮಂದಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗಳನ್ನು ಇಲ್ಲಿನ ಟಿ.ಆರ್.ಸಿ. ಸಭಾಂಗಣದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು.

ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಅಕಾಡೆಮಿ ಸದಸ್ಯರು ಪ್ರಶಸ್ತಿ ನೀಡಿದರು. ಯಾವೊಬ್ಬ ಸಚಿವ, ಶಾಸಕರೂ ಕಾರ್ಯಕ್ರಮಕ್ಕೆ ಹಾಜರಾಗದಿರುವುದು ಕಲಾಸಕ್ತರಲ್ಲಿ ಬೇಸರ ಮೂಡಿಸಿತು.

ಗೌರವ ಪ್ರಶಸ್ತಿಯನ್ನು ಶಿರಸಿಯ ಡಾ.ವಿಜಯ ನಳಿನಿ ರಮೇಶ್, ಹರಪನಹಳ್ಳಿಯ ಬಿ.ಪರಶುರಾಮ್ ಹಾಗೂ ಮಂಗಳೂರಿನ ದಿ.ತಿಮ್ಮಪ್ಪ ಗುಜರನ್ ಅವರ ಪರವಾಗಿ ಪತ್ನಿ ಗುಲಾಬಿ ಗುಜರನ್ ಅವರಿಗೆ ಪ್ರದಾನ ಮಾಡಲಾಯಿತು.

ADVERTISEMENT

ಯಕ್ಷಸಿರಿ ವಾರ್ಷಿಕ ಪ್ರಶಸ್ತಿಯನ್ನು ಮಂಗಳೂರಿನ ಹರಿನಾರಾಯಣ ಬೈಪಾಡಿತ್ತಾಯ, ಸಂಜಯ್ ಕುಮಾರ್ ಶೆಟ್ಟಿ, ಕುಂದಾಪುರದ ಗೋಪಾಲ ಆಚಾರ್ಯ, ಬೇಲ್ತೂರು ರಮೇಶ್, ಉಡುಪಿಯ ಆವರ್ಸೆ ಶ್ರೀನಿವಾಸ ದುಡಿಪಾಳ, ಕುಂದಾಪುರದ ಸುಬ್ರಹ್ಮಣ್ಯ ಧಾರೇಶ್ವರ, ಬಂಟ್ವಾಳದ ವಿಟ್ಲ ಶಂಭು ಶರ್ಮ, ಶಿರಸಿಯ ಎಂ.ಆರ್‌.ಹೆಗಡೆ ಕಾನಗೋಡ, ಶಿರಾ ತಾಲ್ಲೂಕಿನ ಹನುಮಂತರಾಯಪ್ಪ, ಕೋಲಾರದ ಎ.ಎಂ.ಮುಳವಾಗಲಪ್ಪ ಅವರಿಗೆ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.