
ಪ್ರಜಾವಾಣಿ ವಾರ್ತೆಶಿರಸಿ: ತಾಲ್ಲೂಕಿನ ಕುಳವೆಯಲ್ಲಿ ಶುಕ್ರವಾರ ಅಡಿಕೆ ಮರ ಹತ್ತಿ ಗೊನೆ ಕೊಯ್ಯುತ್ತಿದ್ದ ಕೊನೆಗೌಡರೊಬ್ಬರು ಆಯತಪ್ಪಿ ಕೆಳಗೆ ಬಿದ್ದು, ಮೃತಪಟ್ಟಿದ್ದಾರೆ. ವಿಷ್ಣು ನಾರಾಯಣ ನಾಯ್ಕ (68) ಮೃತ ವ್ಯಕ್ತಿ. ಮಂಜುನಾಥ ಭಟ್ಟ ಅವರ ತೋಟದಲ್ಲಿ ಅಡಿಕೆ ಕೊಯ್ಯಲು ಮರ ಹತ್ತಿದ ಸಂದರ್ಭದಲ್ಲಿ ಬಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.