ADVERTISEMENT

ಹೃದಯಾಘಾತದಿಂದ ಪ್ರೊ. ಪಿ.ಎಂ.ಭಟ್ಟ ನಿಧನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 9:04 IST
Last Updated 21 ಸೆಪ್ಟೆಂಬರ್ 2019, 9:04 IST
ಪ್ರೊ. ಪಿ.ಎಂ.ಭಟ್ಟ
ಪ್ರೊ. ಪಿ.ಎಂ.ಭಟ್ಟ   

ಶಿರಸಿ: ಬೆಳಗಾವಿ ಜಿ.ಎಸ್‌.ಎಸ್ ಕಾಲೇಜಿನಲ್ಲಿ ಸಸ್ಯ ವಿಜ್ಞಾನ ಪ್ರಾಧ್ಯಾಪಕರಾಗಿದ್ದ ತಾಲ್ಲೂಕಿನ ಮಂಜವಳ್ಳಿಯ ಪ್ರೊ. ಪಿ.ಎಂ.ಭಟ್ಟ (52) ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ ಪ್ರಾಣಿ ವಿಜ್ಞಾನ ಪ್ರಾಧ್ಯಾಪಕಿ ಸರೋಜಾ ಭಟ್ಟ, ಪುತ್ರಿ ಇದ್ದಾರೆ.

ಪಿ.ಎಂ.ಭಟ್ಟ ಅವರು ಇಲ್ಲಿನ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ 1992ರಿಂದ 2007ರವರೆಗೆ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಅವರು ಔಷಧ ಸಸ್ಯಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT