ADVERTISEMENT

ಕುಂದಕೊರತೆ: ರಸ್ತೆಯ ಹೊಂಡ ಮುಚ್ಚಿ ಜೀವ ಕಾಪಾಡಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 14:53 IST
Last Updated 10 ಆಗಸ್ಟ್ 2022, 14:53 IST
ಕಾರವಾರದ ಹಬ್ಬುವಾಡದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಉಂಟಾಗಿರುವ ದೊಡ್ಡ ದೊಡ್ಡ ಹೊಂಡಗಳು
ಕಾರವಾರದ ಹಬ್ಬುವಾಡದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಉಂಟಾಗಿರುವ ದೊಡ್ಡ ದೊಡ್ಡ ಹೊಂಡಗಳು   

ಕಾರವಾರದ ಹಬ್ಬುವಾಡದಲ್ಲಿ ರಾಜ್ಯ ಹೆದ್ದಾರಿಯು ಹೊಂಡ ಗುಂಡಿಗಳಿಂದ ಕೂಡಿದೆ. ಕಳೆದ ವರ್ಷ ಉಂಟಾದ ಜಾಗದಲ್ಲೇ ಈ ವರ್ಷವೂ ಹೊಂಡಗಳು ಮೂಡಿವೆ.

ಕಳೆದ ವರ್ಷ ರಸ್ತೆಯ ಮಧ್ಯ ಭಾಗದಲ್ಲಿ ಕಾಂಕ್ರೀಟ್ ಹಾಕಿ ದುರಸ್ತಿ ಮಾಡಲಾಗಿತ್ತು. ಕೆಲವು ದಿನಗಳಿಂದ ಸುರಿದ ಮಳೆಗೆ, ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿವೆ. ಇದರ ಅರಿವು ಇಲ್ಲದೇ ವಾಹನಗಳನ್ನು ಚಲಾಯಿಸಿಕೊಂಡು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗಂತೂ ಜೀವಕ್ಕೇ ಅಪಾಯವಾದೀತು.

ಜೋರಾಗಿ ಮಳೆ ಸುರಿಯುತ್ತಿರುವಾಗ ಅಥವಾ ರಾತ್ರಿ ಎದುರಿನಿಂದ ಪ್ರಖರವಾದ ವಾಹನಗಳ ಹೆಡ್‌ಲೈಟ್ ಬೆಳಕಿನ ನಡುವೆ ಈ ಹೊಂಡ ಇರುವುದೇ ತಿಳಿಯುವುದಿಲ್ಲ. ಏನಾದರೂ ಅನಾಹುತವಾಗುವ ಮೊದಲು ಲೋಕೋಪಯೋಗಿ ಇಲಾಖೆ ಅಥವಾ ನಗರಸಭೆಯು ಇಂಥ ಅಪಾಯಕಾರಿ ಹೊಂಡಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು.

ADVERTISEMENT

– ರಮೇಶ ನಾಯ್ಕ, ಕಾರವಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.