ಕಾರವಾರ: ಬಿರುಸಿನ ಗಾಳಿಗೆ ಮರದ ಟೊಂಗೆಗಳು ಬಿದ್ದು ಇಲ್ಲಿನ ಎಂ.ಜಿ.ರಸ್ತೆಯಲ್ಲಿರುವ ನಗರಸಭೆ ಕಚೇರಿ ಸಮೀಪ ಮೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಶನಿವಾರ ರಾತ್ರಿ ಧರೆಗುರುಳಿದವು. ಕಂಬಗಳ ತೆರವಿಗೆ ವಿಳಂಬವಾಗಿದ್ದರಿಂದ ಭಾನುವಾರದ ಸಂತೆಗೆ ಅಡಚಣೆ ಉಂಟಾಯಿತು.
ಸಾಲು ಸಾಲಾಗಿ ಕಂಬಗಳು ಬಿದ್ದಿದ್ದರಿಂದ ಸುಮಾರು 200 ಮೀಟರ್ ದೂರದವರೆಗೆ ವಿದ್ಯುತ್ ತಂತಿಗಳು ಬಿದ್ದಿದ್ದವು. ನಸುಕಿನ ಜಾವದಿಂದಲೇ ಇದೇ ರಸ್ತೆಯಲ್ಲಿ ಅಂಗಡಿ ಇಟ್ಟುಕೊಳ್ಳುತ್ತಿದ್ದ ತರಕಾರಿ ವ್ಯಾಪಾರಿಗಳಿಗೆ ವಹಿವಾಟು ನಡೆಸಲು ಜಾಗದ ಕೊರತೆ ಎದುರಾಯಿತು. ಅಲ್ಲದೆ ಈ ರಸ್ತೆಯಲ್ಲಿ ಕೆಲ ತಾಸುಗಳವರೆಗೆ ಸಂಚಾರ ಸ್ಥಗಿತಗೊಂಡಿತ್ತು.
ಮಧ್ಯಾಹ್ನದ ವೇಳೆಗೆ ಕಂಬಗಳನ್ನು ತೆರವುಗೊಳಿಸಲಾಯಿತು. ಆದರೆ, ಅರ್ಧ ದಿನಕ್ಕೂ ಹೆಚ್ಚ ಕಾಲ 10ಕ್ಕೂ ಹೆಚ್ಚು ಅಂಗಡಿಕಾರರಿಗೆ ವಹಿವಾಟು ನಡೆಸಲು ಅವಕಾಶ ಆಗದೆ ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.