ಶಿರಸಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ನೇತೃತ್ವದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಆ.3ರಂದು ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರುಗಲಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತೆ ಘಟಕದ ಅಧ್ಯಕ್ಷ ಕಿರಣಕುಮಾರ ನಾಯ್ಕ ತಿಳಿಸಿದ್ದಾರೆ.
ರಾಜ್ಯ ಸಮಿತಿ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಧ್ಯಕ್ಷತೆಯಲ್ಲಿ ಅಂದು ಕಾರ್ಯಕ್ರಮ ನಡೆಯಲಿದೆ. ಈ ಸಮಯದಲ್ಲಿ ಶಿರಸಿ ಶಾಖೆಯ ವಾರ್ಷಿಕ ಸರ್ವಸಾಧಾರಣ ಸಭೆಯನ್ನೂ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಶಿರಸಿ ಘಟಕದ ಪರವಾಗಿ ಶಿರಸಿ ತಾಲ್ಲೂಕಿನ ಸರ್ಕಾರಿ ನೌಕರರ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ 2024-25 ನೇ ಸಾಲಿನಲ್ಲಿ ಎಸ್ಎಸ್ಎಲ್‍ಸಿಯಲ್ಲಿ ಶೇ 95ರಷ್ಟು ಮತ್ತು ಪಿಯುಸಿಯಲ್ಲಿ ಶೇ 90ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಕಾರಣ ಎರಡೂ ವಿಭಾಗದಲ್ಲಿ ಶಿರಸಿ ತಾಲ್ಲೂಕಿನ ನೌಕರರ ಅರ್ಹ ಮಕ್ಕಳು ಅಥವಾ ಪಾಲಕರು ಜುಲೈ 27ರ ಒಳಗಾಗಿ ಒಂದು ಫೋಟೋ, ಅಂಕಪಟ್ಟಿ ಪ್ರತಿ ಹಾಗೂ ಕೈ ಬರಹದ ಅರ್ಜಿಯೊಂದಿಗೆ, ಪೋನ್ ನಂಬರ್ ಮತ್ತು ಆಯಾ ಇಲಾಖೆಯ ನಮ್ಮ ಸಂಘದ ನಿರ್ದೇಶಕರ ದೃಢೀಕರಣದೊಂದಿಗೆ, ಅಧ್ಯಕ್ಷರು, ಕ.ರಾ.ಸ.ನೌ.ಸಂ ಜಿಲ್ಲಾ ಶಾಖೆ ಶಿರಸಿ ಇಲ್ಲಿ ಸಲ್ಲಿಸಬೇಕು ಅಥವಾ ನೌಕರರ ಭವನ ಶಿರಸಿಗೆ ಅಂಚೆ ಮೂಲಕ ತಲುಪಿಸಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.