ADVERTISEMENT

ಬ್ರಾಹ್ಮಣರ ಕುರಿತ ಹೇಳಿಕೆ: ಕುಮಾರಸ್ವಾಮಿ ಎದುರು ಸ್ಪಷ್ಟನೆಗೆ ಆಗ್ರಹಿಸಿದ ಅರ್ಚಕ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 11:02 IST
Last Updated 8 ಫೆಬ್ರುವರಿ 2023, 11:02 IST
   

ಗೋಕರ್ಣ: ಬ್ರಾಹ್ಮಣರ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಬೇಕು ಎಂದು ಅರ್ಚಕರೊಬ್ಬರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ತಡೆದ ಘಟನೆ ಗೋಕರ್ಣದಲ್ಲಿ ಬುಧವಾರ ನಡೆಯಿತು.

ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಲು ಕುಮಾರಸ್ವಾಮಿ ತೆರಳುವ ವೇಳೆ ದೇವಸ್ಥಾನದ ಬಳಿ ಅವರಿಗೆ ಎದುರಾದ ಅರ್ಚಕ ನರಸಿಂಹ ದೀಕ್ಷಿತ್, 'ಈಚೆಗೆ ಬ್ರಾಹ್ಮಣರ ಕುರಿತು ನೀಡಿರುವ ಹೇಳಿಕೆ ನೋವುಂಟು ಮಾಡಿದೆ. ನಿಮ್ಮಿಂದ ಸ್ಪಷ್ಟನೆ ಬಯಸುತ್ತಿದ್ದೇನೆ' ಎಂದರು.

'ನಾನು ಜನತಾ ಪರಿವಾರದ ಹಿನ್ನೆಲೆಯವನು. ದೇವೆಗೌಡರ ಕುಟುಂಬದ ಬಗ್ಗೆ ಗೌರವ ಇದೆ. ಆದರೆ ಬ್ರಾಹ್ಮಣರ ಕುರಿತು ಆಡಿರುವ ಮಾತುಗಳಿಂದ ಬೇಸರವಾಗಿದೆ' ಎಂದರು.

ADVERTISEMENT

ಅರ್ಚಕರಿಗೆ ಸಮಜಾಯಿಷಿ ನೀಡಿದ ಕುಮಾರಸ್ವಾಮಿ, 'ಮಹಾರಾಷ್ಟ್ರದ ಪೇಶ್ವೆಗಳ ಕುರಿತಾಗಿ ನಾನು ಹೇಳಿದ್ದೇನೆಯೆ ಹೊರತು ಇಲ್ಲಿನ ಬ್ರಾಹ್ಮಣರನ್ನು ನಿಂದಿಸಿಲ್ಲ. ಬ್ರಾಹ್ಮಣರ ಜತೆಯೆ ಆಡಿ ಬೆಳೆದಿದ್ದೇನೆ. ನಮ್ಮ ಕುಟುಂಬ ಸಂಸ್ಕಾರವಂತರಾಗಿರಲು ಬ್ರಾಹ್ಮಣರ ಒಡನಾಟವೂ ಕಾರಣ' ಎಂದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.